ನವರಾತ್ರಿ ಸಂಭ್ರಮ.. ಕಾರು, ದ್ವಿಚಕ್ರ ವಾಹನ ಓಡಿಸಿ ಮಹಿಳೆಯರಿಂದ ಗರ್ಬಾ ಪ್ರದರ್ಶನ - Video - ಕಾರು ದ್ವಿಚಕ್ರ ವಾಹನಗಳನ್ನು ಓಡಿಸುತ್ತಾ ಗರ್ಬಾ ಪ್ರದರ್ಶನ
Published : Oct 18, 2023, 12:59 PM IST
ರಾಜಕೋಟ್(ಗುಜರಾತ್ ): ನವರಾತ್ರಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದೀಗ ರಾಜ್‌ಕೋಟ್‌ನ ಮಹಿಳೆಯರು ಪ್ರದರ್ಶಿಸಿದ ಗರ್ಬಾ ನೃತ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನವರಾತ್ರಿಯ ಮೂರನೇ ದಿನವಾದ ಮಂಗಳವಾರ (ಅ.17) ಕಾರು ಮತ್ತು ಸ್ಕೂಟರ್‌ಗಳನ್ನು ಓಡಿಸುತ್ತ ಮಹಿಳೆಯರು ಗರ್ಬಾ ಪ್ರದರ್ಶನ ನೀಡಿರುವುದು ಕಂಡುಬಂತು. ಅಷ್ಟೇ ಅಲ್ಲದೇ, ಒಂದು ಕೈಯಲ್ಲಿ ಕತ್ತಿ ಹಿಡಿದು, ಮತ್ತೊಂದು ಕೈಯಲ್ಲಿ ವಾಹನ ಚಲಾಯಿಸುವ ಮೂಲಕ ಸಾಹಸ ಪ್ರದರ್ಶಿಸಿದರು.
ವಿಡಿಯೋದಲ್ಲೇನಿದೆ? :ಮೊದಲು ಮಹಿಳೆಯೊಬ್ಬರು ಬುಲೆಟ್ನಲ್ಲಿ ಎಂಟ್ರಿ ಕೊಟ್ಟಿರುವುದನ್ನು ನೋಡಬಹುದು. ಇದಾದ ಬಳಿಕ ಕಾರಿನಲ್ಲೂ ಕೆಲ ಮಹಿಳೆಯರು ಕಾಣಿಸಿಕೊಂಡಿದ್ದು, ಸ್ಕೂಟರ್ ನಲ್ಲಿದ್ದ ಮಹಿಳೆಯರು ಕತ್ತಿ ತೋರಿಸಿ ಗರ್ಬಾ ಪ್ರದರ್ಶನ ಮಾಡಿದ್ದಾರೆ. ಒಂದು ಕೈಯಿಂದ ಬೈಕ್ ಮತ್ತು ಸ್ಕೂಟರ್ ಹಿಡಿದು ಇನ್ನೊಂದು ಕೈಯಿಂದ ಕತ್ತಿ ಝಳಪಿಸಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಕೆಲವರು ಮಹಿಳಾ ಶಕ್ತಿ ಪ್ರದರ್ಶಿಸಲು ಇದು ಪರಿಪೂರ್ಣವಾದ ಮಾರ್ಗವೆಂದಿದ್ದಾರೆ. ಇನ್ನೂ ಕೆಲವರು ಈ ರೀತಿ ಆಯುಧಗಳನ್ನು ಹಿಡಿದು ಗರ್ಬಾ ಮಾಡಬಾರದು ಎಂದು ಖಂಡಿಸಿದ್ದಾರೆ.
ಇನ್ನು ಗರ್ಬಾ ಗುಜರಾತ್‌ನ ಸಾಂಪ್ರದಾಯಿಕ ನೃತ್ಯ ಪ್ರಾಕಾರವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅನೇಕ ಸಂಪ್ರದಾಯಗಳಂತೆ ಗರ್ಬಾ ಕೂಡ ಧಾರ್ಮಿಕ ಮಹತ್ವ ಪಡೆದುಕೊಂಡಿದೆ. ಅದರಲ್ಲೂ, ನವರಾತ್ರಿ ಸಮಯದಲ್ಲಿ ಇದರ ಪ್ರದರ್ಶನ ಇದ್ದೇ ಇರುತ್ತದೆ.
ಇದನ್ನೂ ಓದಿ :ಖಡ್ಗ ಹಿಡಿದು ಗರ್ಬಾ ಡ್ಯಾನ್ಸ್ ಮಾಡಿದ ಮಹಿಳೆಯರು.. ವಿಡಿಯೋ