ಕರ್ನಾಟಕ

karnataka

ಜೋಡಿ ತಿಮಿಂಗಿಲುಗಳ ದರ್ಶನ

ETV Bharat / videos

ಮುರುಡೇಶ್ವರ ಬಳಿ ಕಾಣಿಸಿಕೊಂಡ ಜೋಡಿ ತಿಮಿಂಗಿಲುಗಳು: ವಿಡಿಯೋ ಸೆರೆ - ತಿಮಿಂಗಿಲ ವಿಡಿಯೋ ಸೆರೆ

By ETV Bharat Karnataka Team

Published : Jan 18, 2024, 4:11 PM IST

ಕಾರವಾರ: ಮುರುಡೇಶ್ವರ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ತಿಮಿಂಗಿಲಗಳ ಚಿನ್ನಾಟ ಗಮನ ಸೆಳೆದಿದೆ. ಮುಂಜಾನೆ ಸ್ಕೂಬಾ ಡೈವಿಂಗ್​ಗೆ ತೆರಳುತ್ತಿದ್ದವರಿಗೆ ಜೋಡಿ ತಿಮಿಂಗಿಲಗಳು ಕಾಣಿಸಿಕೊಂಡಿದ್ದು ಬೃಹತ್ ತಿಮಿಂಗಿಲಗಳು ನೋಡುವ ಅದೃಷ್ಟ ಲಭ್ಯವಾಗಿದೆ. ಮುರುಡೇಶ್ವರದಿಂದ ನೇತ್ರಾಣಿ ದ್ವೀಪಕ್ಕೆ ಸ್ಕೂಬಾ ಡೈವಿಂಗಗ್ ಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಈ ತಿಮಿಂಗಿಲಗಳು ಹತ್ತಿರದಲ್ಲಿಯೇ ಕಾಣಿಸಿಕೊಂಡಿವೆ. 

ಬೋಟ್ ಹತ್ತಿರದಲ್ಲೇ ತಿಮಿಂಗಿಲಗಳು ಒಂದರ ಹಿಂದೆ ಒಂದರಂತೆ ಸಾಗಿದ್ದು ಕೆಲವು ಪ್ರವಾಸಿಗರು ಒಮ್ಮೆಗೆ ದಿಗಿಲುಗೊಂಡಿದ್ದರು. ಇನ್ನು ಕೆಲವರು ತಿಮಿಂಗಿಲಗಳು ದೂರ ಹೋದದ್ದನ್ನು ನೋಡಿ ಸಂತೋಷಪಟ್ಟರು. ತಿಮಿಂಗಿಲಗಳು ಓಡಾಡುವುದನ್ನು ಸ್ಕೂಬಾ ಡೈವ್ ಸಿಬ್ಬಂದಿ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಬಾರಿ ವೈರಲ್​ ಆಗಿದೆ. 

ಏಷ್ಯಾದಲ್ಲಿಯೇ ಎರಡನೇ ಅತೀ ದೊಡ್ಡ ಶಿವನ ಮೂರ್ತಿ ಹೊಂದಿರುವ ಮುರುಡೇಶ್ವರಕ್ಕೆ ವಾರ್ಷಿಕ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಇದೋಂದು ಧಾರ್ಮಿಕ ಕ್ಷೇತ್ರದ ಜೊತೆಗೆ ಪ್ರವಾಸಿ ತಾಣವೂ ಆಗಿದೆ. ಇಲ್ಲಿನ ಕಡಲತೀರ, ವಾಟರ್ ಸ್ಪೋರ್ಟ್ಸ್ ಆಕರ್ಷಣೆಯಿಂದಾಗಿ ಪ್ರವಾಸಿ ತಾಣಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಶಾಲಾ ಕಾಲೇಜುಗಳ ಶೈಕ್ಷಣಿಕ ಪ್ರವಾಸ, ವೀಕೆಂಡ್, ಹಬ್ಬ ಹರಿದಿನಗಳಲ್ಲಿ ಸಾವಿರಾರು ಮಂದಿ ಈ ಸ್ಥಳಕ್ಕೆ ಆಗಮಿಸುತ್ತಾರೆ.      

ಇದನ್ನೂ ಓದಿ:ನಂಜನಗೂಡು: ಬೀದಿ ನಾಯಿಗಳ ದಾಳಿಗೆ ಹೆದರಿ ಪೊಲೀಸ್ ಠಾಣೆಗೆ ನುಗ್ಗಿದ ಜಿಂಕೆ... ಪ್ರಾಥಮಿಕ ಚಿಕಿತ್ಸೆ ನೀಡಿದ ಪೊಲೀಸರು

ABOUT THE AUTHOR

...view details