ಕರ್ನಾಟಕ

karnataka

ಕುದುರೆ ಏರಿ ಗ್ರಾಹಕನಿಗೆ ಫುಡ್​ ಡೆಲಿವರಿ ಮಾಡಿದ ಜೋಮೋಟೋ ಬಾಯ್​

ETV Bharat / videos

VIDEO: ಕುದುರೆ ಏರಿ ಗ್ರಾಹಕನಿಗೆ ಫುಡ್​ ಡೆಲಿವರಿ ಮಾಡಿದ ಜೊಮ್ಯಾಟೊ ಬಾಯ್​ - ಕುದುರೆ ಏರಿ

By ETV Bharat Karnataka Team

Published : Jan 4, 2024, 9:00 AM IST

ಹೈದರಾಬಾದ್​, ತೆಲಂಗಾಣ:ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿದ್ರೆ, ಅದನ್ನು ಕೆಲವೇ ನಿಮಿಷಗಳಲ್ಲಿ ಡೆಲಿವರಿ ಬಾಯ್​ಗಳು ಗ್ರಾಹಕರಿಗೆ ತಲುಪಿಸುತ್ತಾರೆ. ಡೆಲಿವರಿ ವೇಳೆ ಟ್ರಾಫಿಕ್ ಹಾಗೂ ಇತರ ಅಡೆತಡೆ ಎದುರಿಸಿ ನಿಗದಿತ ಸಮಯಕ್ಕೆ ಆಹಾರ ತಲುಪಿಸಲು ಡೆಲಿವರಿ ಬಾಯ್​ಗಳು ಪಡುವ ಕಷ್ಟ ಅಷ್ಟಿಷ್ಟಲ್ಲ. ಈ ನಡುವೆ ವಾಹನದ ಪೆಟ್ರೋಲ್ ಖಾಲಿಯಾದರೆ ಅಥವಾ ಯಾವುದಾದರೂ ಕಾರಣಕ್ಕೆ ಗಾಡಿ ಕೈಕೊಟ್ಟರೆ ಅವರು ಕೆಲಸ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಮೊನ್ನೆ ಮಂಗಳವಾರ ದೇಶಾದ್ಯಂತ ಪೆಟ್ರೋಲ್ ಕೊರತೆಯಿಂದಾಗ ಕೆಲವೆಡೆ ಡೆಲಿವರಿ ಬಾಯ್​ಗಳೂ ಕೂಡ ಪರದಾಡುವಂತಾಗಿತ್ತು.

ಆದರೆ, ಇಲ್ಲೊಬ್ಬ ಫುಡ್ ಡೆಲಿವರಿ ಬಾಯ್ ತನ್ನ ಬೈಕ್​ನಲ್ಲಿ ಪೆಟ್ರೋಲ್ ಖಾಲಿಯಾದಾಗ ಬಂಕ್​ಗಳಲ್ಲಿ ಗಂಟೆಗಟ್ಟಲೇ ಕಾಯುವ ಬದಲು ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಹೌದು, ಆರ್ಡರ್​ ಮಾಡಿದ್ದ ಗ್ರಾಹಕನಿಗೆ ಕುದುರೆ ಏರಿ ಆಹಾರವನ್ನು ತಲುಪಿಸಿದ್ದಾರೆ. ಈ ಘಟನೆ ಹೈದರಾಬಾದ್‌ನ ಜನರ ಗಮನ ಸೆಳೆದಿದೆ.

ಮಂಗಳವಾರ ಬಂಕ್‌ನಲ್ಲಿ ಪೆಟ್ರೋಲ್‌ಗಾಗಿ ಸರದಿಯಲ್ಲಿ ನಿಂತಿದ್ದ ಜೊಮ್ಯಾಟೊ ಡೆಲಿವರಿ ಬಾಯ್ ತನಗೆ ಬೇಕಾದಷ್ಟು ಇಂಧನ ಸಿಗದ ಕಾರಣ ಬೈಕ್​ನ್ನು ಅಲ್ಲೇ ಬಿಟ್ಟಿದ್ದರು. ತದನಂತರ ಕುದುರೆ ಸವಾರಿ​ ಮಾಡಿಕೊಂಡು ಬಂದು ಗ್ರಾಹಕನಿಗೆ ಆಹಾರ ತಲುಪಿಸಿದರು. ಇದು ನಡೆದಿರುವುದು ಹೈದರಾಬಾದ್‌ನ ಚಂಚಲಗುಡ ಪ್ರದೇಶದಲ್ಲಿ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಓದಿ:ಜೊಮ್ಯಾಟೊ ಪ್ಲಾಟ್​ಫಾರ್ಮ್ ಫೀ ₹1 ಹೆಚ್ಚಳ; ಪ್ರತಿ ಆರ್ಡರ್​ಗೆ ಇನ್ನು ₹4 ಶುಲ್ಕ

ABOUT THE AUTHOR

...view details