ಕರ್ನಾಟಕ

karnataka

ಪವಾಡ ಸದೃಶ್ಯ ರೀತಿ ಪಾರಾದ ಮಹಿಳೆ

ETV Bharat / videos

Viral video: ಉಳ್ಳಾಲದಲ್ಲಿ ಪವಾಡ ಸದೃಶ್ಯ ರೀತಿ ಮಹಿಳೆ ಪಾರು - ಬಸ್ ಚಾಲಕನ ಚಾಣಾಕ್ಷತ

By

Published : Jun 21, 2023, 1:00 PM IST

Updated : Jun 22, 2023, 12:30 PM IST

ಉಳ್ಳಾಲ (ದಕ್ಷಿಣ ಕನ್ನಡ): ಪಾದಚಾರಿ ಮಹಿಳೆಯೊಬ್ಬರು ಬಸ್ ಅಪಘಾತದಿಂದ ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ತೌಡುಗೋಳಿ ಸಮೀಪದ ನರಿಂಗಾನದಲ್ಲಿ ಇತ್ತೀಚೆಗೆ ನಡೆದಿದ್ದು, ಈ ಕುರಿತಾದ ವಿಡಿಯೋ ವೈರಲ್ ಆಗಿದೆ. ಮಂಗಳೂರು ಮುಡಿಪುಗೆ ಚಲಿಸುವ ಗೋಪಾಲಕೃಷ್ಣ ಖಾಸಗಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆಯ ಜೀವ ಉಳಿದಿದೆ.

ಇದನ್ನೂ ಓದಿ :ರಾಮನಗರ: ಮನಕಲಕುವಂತಿದೆ ಅಪಘಾತಕ್ಕೂ ಮುಂಚಿನ ಗೆಳೆಯರ ಕುಚುಕು ವಿಡಿಯೋ..

ವಿಡಿಯೋದಲ್ಲೇನಿದೆ? : ಮಹಿಳೆಯೋರ್ವರು ಪಕ್ಕದಲ್ಲಿ ಬರುವ ವಾಹನಗಳನ್ನು ಗಮನಿಸದೆ ರಸ್ತೆ ದಾಟಿದ್ದಾರೆ. ಈ ವೇಳೆ ಎದುರಿನಿಂದ ಬಸ್ ಬಂದಿದೆ. ಮಹಿಳೆ ರಸ್ತೆ ದಾಟುವುದನ್ನು ಗಮನಿಸಿದ ಡ್ರೈವರ್ ಕೂಡಲೇ ಎಡಕ್ಕೆ ಬಸ್​ ತಿರುಗಿಸಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬಳಿಕ, ಎಲ್ಲರೂ ಮಹಿಳೆಯ ಆರೋಗ್ಯ ವಿಚಾರಿಸಿ ಕಳುಹಿಸಿದ್ದಾರೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಇದನ್ನೂ ಓದಿ :ರೈಲು ಹಳಿಯ ಮೇಲೆ ಕಲ್ಲು ಜೋಡಿಸಿಟ್ಟ ಬಾಲಕ.. ಅಪಾಯಕಾರಿ ವಿಡಿಯೋ ವೈರಲ್​

ಇನ್ನು ಘಟನೆ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿ, ಚಾಲಕನ ವಿರುದ್ಧ ಅತೀವೇಗ ಮತ್ತು ಅಪಾಯಕಾರಿ ವಾಹನ ಚಾಲನೆ ಅಡಿ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.

Last Updated : Jun 22, 2023, 12:30 PM IST

ABOUT THE AUTHOR

...view details