ಕರ್ನಾಟಕ

karnataka

ಬಿಜೆಪಿಯಲ್ಲಿ ಬೇಸತ್ತು ಶೆಟ್ಟರ್​​ ಮತ್ತು ಸವದಿ ಕಾಂಗ್ರೆಸ್​ ಸೇರಿದ್ದಾರೆ : ವಿಜಯಾನಂದ ಕಾಶಪ್ಪನವರ್​

ETV Bharat / videos

ಬಿಜೆಪಿಯಲ್ಲಿ ಬೇಸತ್ತು ಶೆಟ್ಟರ್​​ - ಸವದಿ ಕಾಂಗ್ರೆಸ್​ ಸೇರಿದ್ದಾರೆ : ವಿಜಯಾನಂದ ಕಾಶಪ್ಪನವರ್​

By

Published : Apr 22, 2023, 4:38 PM IST

ಬಾಗಲಕೋಟೆ : ಬಿಜೆಪಿಯವರು ಲಿಂಗಾಯತ ಸಮುದಾಯಕ್ಕೆ ಏನು ಮಾಡಿದ್ದಾರೆ,  ಸಮುದಾಯದ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಹಾಗೂ ​​ಲಕ್ಷ್ಮಣ್​ ಸವದಿಗೆ ಏನು ಬೆಲೆ ಕೊಟ್ಟಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಲಿಂಗಾಯತ ಸಮುದಾಯಕ್ಕೆ ನ್ಯಾಯಕೊಡಿಸುವ ಕೆಲಸವನ್ನು ಮಾಡದ್ದಕ್ಕೆ ಬೇಸತ್ತು ಜಗದೀಶ್​​ ಶೆಟ್ಟರ್​ ಹಾಗೂ ಲಕ್ಷಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಬಂದಿದ್ದಾರೆ ಎಂದು ಕಾಂಗ್ರೆಸ್​ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್​ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲೂ ಅನೇಕ ಲಿಂಗಾಯತ ನಾಯಕರಿದ್ದಾರೆ. ಇಂದು ರಾಜ್ಯದ ಜನತೆ ಬಿಜೆಪಿಯ ದುರಾಡಳಿತವನ್ನು ಧಿಕ್ಕರಿಸಿದ್ದು, ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್​​ನ್ನು ಅಧಿಕಾರಕ್ಕೆ ತರಬೇಕು ಎಂದು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್​ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಆಡಳಿತಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಇನ್ನು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಾಳೆ ಬಸವಣ್ಣನವರ ಐಕ್ಯ ಸ್ಥಳವಾದ ಕೂಡಲಸಂಗಮಕ್ಕೆ ಭೇಟಿ ನೀಡಲಿದ್ದಾರೆ. ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿಗಳು ಬಸವ ಜಯಂತಿ ನಿಮಿತ್ತ ರಾಹುಲ್ ಗಾಂಧಿ ಅವರನ್ನು ಕರೆಸಿದ್ದಾರೆ. ಇದು ಪಕ್ಷದ ಕಾರ್ಯಕ್ರಮ ಅಲ್ಲ. ಇದು ಸಮಾಜದ ಕಾರ್ಯಕ್ರಮ. ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​, ಎಂ.ಬಿ ಪಾಟೀಲ್​ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿಜಯಾನಂದ ಕಾಶಪ್ಪನವರ್ ತಿಳಿಸಿದರು.

ಇದನ್ನೂ ಓದಿ :ರಾಜ್ಯ ನಾಯಕರ ಜೊತೆ ಅಮಿತ್ ಶಾ ಮಿಡ್ ನೈಟ್ ಮೀಟಿಂಗ್: ಬಿಜೆಪಿ ಚಾಣಕ್ಯ ನೀಡಿದ ಸಲಹೆಗಳೇನು ಗೊತ್ತಾ?

ABOUT THE AUTHOR

...view details