ಅಮೇಥಿ ಆಸ್ಪತ್ರೆಯಲ್ಲಿ ಸಿಗದ ಸ್ಟ್ರೆಚರ್: ಬ್ಯಾಂಡೇಜ್ ಕಟ್ಟಿಕೊಂಡ ರೋಗಿ ಪಾಡು ನೋಡಿ - ಸಮುದಾಯ ಆರೋಗ್ಯ ಕೇಂದ್ರ
ಅಮೇಥಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮತ್ತೊಂದು ಆಸ್ಪತ್ರೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಪ್ರಕರಣ ಬೆಳಕಿಗೆ ಬಂದಿದೆ. ಅಮೇಥಿಯ ಜಗದೀಶ್‌ಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಟ್ರೆಚರ್ ನೀಡದ ಕಾರಣ ಕಾಲಿಗೆ ಪೆಟ್ಟಾಗಿರುವ ರೋಗಿಯೊಬ್ಬರು ತನ್ನ ಕಾಲನ್ನು ಎಳೆದುಕೊಂಡು ಹೋಗುವ ವಿಡಿಯೋ ವೈರಲ್ ಆಗಿದೆ. ಕಾಲಿಗೆ ಬ್ಯಾಂಡೆಜ್ ಕಟ್ಟಿಕೊಂಡು ಒಪಿಡಿಯಿಂದ ಕಾಲನ್ನು ಎಳೆದುಕೊಂಡು ಬಂದಿದ್ದು, ನಂತರ ಆತನನ್ನು ಕುಟುಂಬಸ್ಥರು ಎತ್ತಿಕೊಂಡು ಕರೆದೊಯ್ದಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಚ್‌ಸಿ ಅಧೀಕ್ಷಕ ಡಾ.ಪ್ರದೀಪ್ ತಿವಾರಿ, ಆಸ್ಪತ್ರೆಯಲ್ಲಿ ಸ್ಟ್ರೆಚರ್‌ಗಳ ಕೊರತೆ ಇಲ್ಲ. ಸ್ಟ್ರೆಚರ್ ಕೇಳದಿದ್ದರೆ ನಾವು ಏನು ಮಾಡಬೇಕೆಂದು ಉಡಾಫೆ ಉತ್ತರ ಕೊಟ್ಟಿದ್ದಾರೆ.
Last Updated : Feb 3, 2023, 8:31 PM IST