ಕರ್ನಾಟಕ

karnataka

By

Published : Dec 4, 2022, 4:19 PM IST

Updated : Feb 3, 2023, 8:34 PM IST

ETV Bharat / videos

ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದಲ್ಲಿ ಮಹಿಳಾ ಸಿಬ್ಬಂದಿ ಡ್ಯಾನ್ಸ್​​ : ವಿಡಿಯೋ ವೈರಲ್​​​​

ಉಜ್ಜಯಿನಿ(ಮಧ್ಯಪ್ರದೇಶ) : ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನೃತ್ಯ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಇತ್ತೀಚಿಗೆ ಧಾರ್ಮಿಕ ಸ್ಥಳಗಳಲ್ಲಿ ಸಿನಿಮಾ ಹಾಡುಗಳಿಗೆ ಕುಣಿಯುವ ಟ್ರೆಂಡ್ ಶುರುವಾಗಿದ್ದು, ಇದರಿಂದ ಅನೇಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೆಲಸವಾಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಮಹಾಕಾಳೇಶ್ವರ ದೇವಾಲಯದ ವಿಶ್ರಾಮ್ ಧಾಮದಲ್ಲಿ ರೀಲ್ಸ್ ಮಾಡಿ, ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ ಈ ವಿಡಿಯೋ ಯಾವಾಗಿನದ್ದು ಎಂಬ ಬಗ್ಗೆ ಮಾಹಿತಿ ಇಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
Last Updated : Feb 3, 2023, 8:34 PM IST

ABOUT THE AUTHOR

...view details