ಜನಾಭಿಪ್ರಾಯ ಸಂಗ್ರಹಕ್ಕೆ ಜೋಳಿಗೆ ಹಿಡಿದು ಜನರ ಬಳಿ ಹೋಗುವೆ - ಸೊಗಡು ಶಿವಣ್ಣ
ತುಮಕೂರು:ಠೇವಣಿ ಹಣ ಸಂಗ್ರಹಿಸಲು ಜೋಳಿಗೆ ಹಿಡಿದಿದ್ದು ಇದು ಜನಾಭಿಪ್ರಾಯಕ್ಕೆ ವಿನೂತನ ಪ್ರಯತ್ನವಾಗಿದೆ. ಜೋಳಿಗೆ ತಮಟೆಯೊಂದಿಗೆ ಮತದಾರರ ಮುಂದೆ ಹೋಗಲು ಸಿದ್ಧತೆ ನಡೆಸಿರುವುದಾಗಿ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಜೋಳಿಗೆ ಹಿಡಿದು ಮತದಾರನ ಮುಂದೆ ಹೋಗುತ್ತಿದ್ದು ಒಂದು ಜೋಳಿಗೆಗೆ ನೋಟು, ಇನ್ನೊಂದು ಜೋಳಿಗೆಗೆ ವೋಟು ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಜೋಳಿಗೆ ಹಿಡಿದು ಜೈಲಿಗೆ ಹೋಗಿದ್ದೆ:1977 ರಲ್ಲಿ ವಾಕ್ ಸ್ವಾತಂತ್ರ ಕಿತ್ತುಕೊಂಡಿದ್ದಾರೆಂದು ಜೋಳಿಗೆ ಹಿಡಿದು ಜೈಲಿಗೆ ಹೋಗಿದ್ದೆನು. ಮತದಾರರು ನೀಡಿರುವ ಜೋಳಿಗೆಗಳು ಇವಾಗಿವೆ. ಭಾನುವಾರ ಕಾಳಮ್ಮ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜೋಳಿಗೆ ಹಿಡಿದು ಪ್ರಚಾರ ಆರಂಭಿಸಲಾಗುವುದು. ಠೇವಣಿಗಾಗಿ ಜನರಿಂದಲೇ ಹಣ ಸಂಗ್ರಹಿಸಲು ಜೋಳಿಗೆ ಹಿಡಿದಿದ್ದು, ಪ್ರತಿ ದಿನ ತುಮಕೂರು ನಗರದ ಒಂದೊಂದು ವಾರ್ಡ್ ನಲ್ಲಿ ಓಡಾಟ ಮಾಡುತ್ತಾ ಪ್ರಚಾರ ನಡೆಸುತ್ತೇನೆ ಎಂದು ಹೇಳೀದರು.
ನಾನು ಮಾಡಿರುವ ಕಾಯಕವನ್ನು ಹೇಳಿಕೊಂಡು ಪ್ರಚಾರ ನಡೆಸುತ್ತೇನೆ. ಹಿರಿಯರ ಮಾತಿಗೆ ಬೆಲೆ ಕೊಟ್ಟು 2018 ರಲ್ಲಿ ಟಿಕೆಟ್ ಬಿಟ್ಟು ಕೊಟ್ಟಿದ್ದೆ.ಆದರೆ ಈ ಬಾರಿ ಬಿಜೆಪಿಯಿಂದ ತುಮಕೂರು ನಗರ ಅಭ್ಯರ್ಥಿ ನಾನೇ ಎಂದ ಹೇಳಿದರು.ಇದೇ ವೇಳೆ ಸೊಗಡು ಶಿವಣ್ಣ ಅವರ ಜೋಳಿಗೆಗೆ ಬೆಂಬಲಿಗರು ಹಣ ಹಾಕಿದರು.
ಇದನ್ನೂಓದಿ:ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ: ಸಿದ್ದರಾಮಯ್ಯ ವಾಗ್ದಾಳಿ