ಚಿಕ್ಕಬಳ್ಳಾಪುರ: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಕದ್ದ ಕಳ್ಳ- ಸಿಸಿಟಿವಿ ದೃಶ್ಯ - ಕೇಸರಿ ಜ್ಯುವೆಲರ್ಸ್
Published : Nov 30, 2023, 11:06 AM IST
ಚಿಕ್ಕಬಳ್ಳಾಪುರ:ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ಬಂದ ವ್ಯಕ್ತಿ ಅಂಗಡಿಯವರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಚಿಕ್ಕಬಳ್ಳಾಪುರ ನಗರ ಗಂಗಮ್ಮ ಗುಡಿ ರಸ್ತೆಯ ಕೇಸರಿ ಜ್ಯುವೆಲರ್ಸ್ನಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜ್ಯುವೆಲರ್ಸ್ ಮಾಲೀಕ ಕಿರಣ್ ಮನೆಗೆ ಊಟಕ್ಕೆ ಹೋಗಲು ಪತ್ನಿಯನ್ನು ಅಂಗಡಿಯಲ್ಲಿ ಕೂರಿಸಿದ್ದರು. ಈ ವೇಳೆ ಹಿಂದಿಯಲ್ಲಿ ಮಾತನಾಡಿಕೊಂಡು ಗ್ರಾಹಕರ ಸೋಗಿನಲ್ಲಿ ಬಂದ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿ, ಮಗುವಿಗೆ ಉಂಗುರ ತೋರಿಸಿ ಎಂದು ಹಲವು ಚಿನ್ನದ ಉಂಗುರಗಳನ್ನು ತೆಗೆಸಿದ್ದಾನೆ. ಅದು ಬೇಡ, ಇದು ಬೇಡ ಅಂತೆಲ್ಲ ಯಾಮಾರಿಸಿ 25 ಗ್ರಾಂನಷ್ಟು ಮಾಂಗಲ್ಯ ಸರಕ್ಕೆ ಬಳಸುವ ಚಿನ್ನದ ಗುಂಡುಗಳಿದ್ದ ಕವರ್ ಅನ್ನು ಕ್ಷಣಾರ್ಧದಲ್ಲಿ ತೆಗೆದು ಜೇಬಿಗಿಳಿಸಿದ್ದಾನೆ. ನಂತರ ಇತರೆ ಗ್ರಾಹಕರು ಬರುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಅನುಮಾನಗೊಂಡ ಚಿನ್ನದಂಗಡಿ ಮಾಲೀಕ ಕಿರಣ್ ಸಿಸಿಟಿವಿ ಚೆಕ್ ಮಾಡಿದಾಗ ಕಳ್ಳನ ಕರಾಮತ್ತು ಬಯಲಾಗಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಲೂಧಿಯಾನ ಗ್ಯಾಂಗ್ಸ್ಟರ್, ಪೊಲೀಸರ ನಡುವೆ ಗುಂಡಿನ ದಾಳಿ : ಇಬ್ಬರು ಆರೋಪಿಗಳು ಫಿನಿಶ್..