ಚಿಕ್ಕಮಗಳೂರು: ಕಾರಿನಡಿ ಸಿಲುಕಿದ ಬೈಕ್ ಎಳೆದೊಯ್ದ ಚಾಲಕ- ವಿಡಿಯೋ - ಈಟಿವಿ ಭಾರತ ಕರ್ನಾಟಕ
ಚಿಕ್ಕಮಗಳೂರು:ನಗರದ ಬೈಪಾಸ್ ರಸ್ತೆಯಲ್ಲಿಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ಚಿಕ್ಕಮಗಳೂರು ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಘಟನೆ ನಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ (ಸೋಮವಾರ) ರಾತ್ರಿ 10 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ.
ಬೈಪಾಸ್ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ. ಅಪಘಾತದ ನಂತರ ಕಾರಿನಡಿ ಸಿಲುಕಿದ್ದ ಬೈಕ್ ಅನ್ನು ಚಾಲಕ ಸುಮಾರು 100 ಅಡಿಗಳಷ್ಟು ದೂರ ಎಳೆದೊಯ್ದಿದ್ದಾನೆ. ಬೈಕ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಆದರೂ, ಚಾಲಕ ಕಾರು ನಿಲ್ಲಿಸಿಲ್ಲ. ರಸ್ತೆ ಪಕ್ಕದಲ್ಲಿದ್ದ ಜನರು ಅಪಘಾತ ಗಮನಿಸಿ ಸ್ಥಳಕ್ಕೆ ಓಡಿ ಬಂದಿದ್ದರು.
ಆಗ, ಚಾಲಕ ಕಾರು ನಿಲ್ಲಿಸಿದ್ದಾನೆ. ಕಾರು ನಿಲ್ಲುತ್ತಿದ್ದಂತೆ ಬೈಕ್ ಕಾರಿನಿಂದ ಬೇರ್ಪಟ್ಟಿದೆ. ನಂತರ ಚಾಲಕ ಕಾರನ್ನು ರಸ್ತೆಬದಿ ತೆಗೆದುಕೊಂಡು ನಿಲ್ಲಿಸದೇ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾರು ಚಾಲಕನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Murder: ಚಿಕ್ಕಮಗಳೂರಿನಲ್ಲಿ ತಂದೆ ಸೇರಿ ಇಬ್ಬರನ್ನು ಮಚ್ಚಿನಿಂದ ಕೊಂದ ಮಗ; ತಾಯಿ ಗಂಭೀರ