ಕರ್ನಾಟಕ

karnataka

ಸಫಾರಿ ವಾಹನಗಳ ಕಂಡು ಕೆಲಕಾ ದಿಕ್ಕು ತೋಚದೆ ಕಕ್ಕಾಬಿಕ್ಕಿಯಾದ ಹುಲಿ: ವಿಡಿಯೋ

ETV Bharat / videos

ಸಫಾರಿ ವಾಹನಗಳನ್ನ ಕಂಡು ದಿಕ್ಕು ತೋಚದೇ ಕಕ್ಕಾಬಿಕ್ಕಿಯಾದ ಹುಲಿ: ವಿಡಿಯೋ - Dammanakatte Kakanakote Safari Center

By

Published : Aug 7, 2023, 10:40 AM IST

ಮೈಸೂರು :ಸಫಾರಿ ವಾಹನಗಳಿಂದ ಕೆಲಕಾಲ ಹುಲಿ ಸಂಚಾರಕ್ಕೆ ಅಡ್ಡಿಯಾದ ಪ್ರಸಂಗ ನಡೆಯಿತು. ಈ ವೇಳೆ ಹುಲಿ ದಾರಿ ತೋಚದೇ ಗೊಂದಲಕ್ಕೀಡಾದ ಘಟನೆ ಜಿಲ್ಲೆಯ ಹೆಚ್ ಡಿ ಕೋಟೆ ಬಳಿಯ ದಮ್ಮನಕಟ್ಟೆ ಸಫಾರಿ ಕೇಂದ್ರದ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್​ ಆಗಿದೆ.

ಹೇರಳವಾಗಿ ಕಾಡು ಪ್ರಾಣಿಗಳ ದರ್ಶನ ಸಿಗುವ ಸಫಾರಿ ಕೇಂದ್ರಗಳಲ್ಲಿ ಒಂದಾದ ಹೆಚ್ ಡಿ ಕೋಟೆ ಬಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ಸಫಾರಿ ಜೀಪ್​ಗಳಿಂದ ಕೆಲವೊಮ್ಮೆ ಕಾಡು ಪ್ರಾಣಿಗಳ ಸ್ವತಂತ್ರ ಚಲನವಲನಕ್ಕೆ ಕಿರಿಕಿರಿ ಉಂಟಾಗುತ್ತಿದೆ.

ಇದನ್ನೂ ಓದಿ:Tiger hunts Bison: ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆ ನಡುವೆ ಕಾಡೆಮ್ಮೆ ಬೇಟೆಯಾಡಿದ ಹುಲಿ- ವಿಡಿಯೋ

ಇದಕ್ಕೆ ನಿದರ್ಶನ ಎಂಬಂತೆ ಕಾಡಿನಲ್ಲಿ ಹುಲಿಯೊಂದು ಸಂಚರಿಸುತ್ತಿದ್ದು, ಅದನ್ನು ನೋಡಲು ಐದಕ್ಕೂ ಹೆಚ್ಚು ಸಫಾರಿ ವಾಹನಗಳು ರಸ್ತೆಯಲ್ಲೇ ಸುತ್ತುವರಿದು ನಿಂತಿದ್ದವು. ಈ ಸಂದರ್ಭದಲ್ಲಿ ಹುಲಿ ಯಾವ ಕಡೆ ಹೋಗಬೇಕು ಎಂದು ದಿಕ್ಕು ತೋಚದೇ ಕಕ್ಕಾಬಿಕ್ಕಿಯಾಗಿ ನಿಂತಿತ್ತು. ಕೊನೆಗೆ ಆ ಕಡೆ ಈ ಕಡೆ ಹೆಜ್ಜೆ ಹಾಕಿ, ಒಂದು ಸುತ್ತು ಕಣ್ಣಾಯಿಸಿ ಕಾಡಿನತ್ತ ಹೆಜ್ಜೆ ಹಾಕಿದೆ. ಈ ಅಪರೂಪದ ದೃಶ್ಯವನ್ನು ಸಫಾರಿಯಲ್ಲಿದ್ದ ಪ್ರವಾಸಿಗ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದು, ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ:Tiger viral video: ಮಳೆ ನೀರು ಕುಡಿದು ದಣಿವಾರಿಸಿಕೊಂಡ ವ್ಯಾಘ್ರ: ಬಂಡೀಪುರದಲ್ಲಿ ಸೆರೆಸಿಕ್ಕ ದೃಶ್ಯ ನೋಡಿ

ABOUT THE AUTHOR

...view details