ರಗ್ಗು, ದಿಂಬು, ತಟ್ಟೆ ಹಿಡಿದು ರೋಹಿಣಿ ಸಿಂಧೂರಿ ಅಭಿಮಾನಿಗಳ ಪ್ರತಿಭಟನೆ - Etv Bharat Kannada
ಮೈಸೂರು: ಆಡಳಿತ ತರಬೇತಿ ಸಂಸ್ಥೆ(ಎಟಿಐ)ಯ ಕೆಲವು ವಸ್ತುಗಳನ್ನು ರೋಹಿಣಿ ಸಿಂಧೂರಿ ತೆಗೆದುಕೊಂಡು ಹೋಗಿದ್ದಾರೆ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ರೊಹಿಣಿ ಸಿಂಧೂರಿ ಅಭಿಮಾನಿಗಳು ಇಂದು ರಗ್ಗು, ದಿಂಬು, ಲೋಟ, ತಟ್ಟೆ ಹಿಡಿದು ರೂಪಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯೆದುರು ಪ್ರತಿಭಟನಾಕಾರರು ಜಮಾಯಿಸಿದ್ದರು.
ರೋಹಿಣಿ ಪರ ಜೈಕಾರ ಕೂಗಿದ ಅಭಿಮಾನಿಗಳು, ರೂಪಾ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. "ರೋಹಿಣಿಯವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಲೋಟ, ದಿಂಬು, ಜಂಬು ಹೊತ್ತೊಯ್ದಿದ್ದಾರೆ ಎಂದು ಹೇಳಿದ್ದಾರೆ. ಅದು ನಿಜವಾಗಿದ್ದರೆ ಆ ಎಲ್ಲಾ ಪದಾರ್ಥಗಳನ್ನು ನಾವೇ ಕೊಡುತ್ತೇವೆ" ಎಂದರು. ಸ್ಥಳಕ್ಕಾಗಮಿಸಿದ ಪೊಲೀಸರು, ಪ್ರತಿಭಟನೆಗೆ ಅನುಮತಿ ಪತ್ರ ತೋರಿಸುವಂತೆ ಕೇಳಿದಾಗ, ಸ್ಥಳದಿಂದ ಪ್ರತಿಭಟನಕಾರರು ತೆರಳಿದರು.
ಇದನ್ನೂ ಓದಿ:ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಯಾರನ್ನೂ ತಡೆದಿಲ್ಲ: ಡಿ. ರೂಪಾ