ತೀವ್ರ ಚಳಿಯಿಂದ ಹೆಪ್ಪುಗಟ್ಟಿದ ರಿಷಿಗಂಗಾ ನದಿಯ ಜಲಪಾತ: ವಿಡಿಯೋ - ಉತ್ತರಾಖಂಡ
ಚಮೋಲಿ(ಉತ್ತರಾಖಂಡ): ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ಬದರಿನಾಥ ಸೇರಿದಂತೆ ಇಡೀ ಜಿಲ್ಲೆಯಲ್ಲಿ ತಾಪಮಾನದಲ್ಲಿ ಭಾರಿ ಇಳಿಕೆ ಕಂಡು ಬರುತ್ತಿದೆ. ಅದೇ ಸಮಯದಲ್ಲಿ, ಪರ್ವತಗಳಲ್ಲಿನ ಮೈಕೊರೆಯುವ ಚಳಿಯಿಂದ ಜಲಪಾತಗಳ ಜತೆಗೆ, ಬದರಿನಾಥದಲ್ಲಿ ಹರಿಯುವ ರಿಷಿಗಂಗಾ ನದಿ ಕೂಡ ಮಂಜುಗಡ್ಡೆಯಾಗಿ ಮಾರ್ಪಟ್ಟಿದೆ. ನಿರಂತರವಾಗಿ ಹೆಚ್ಚುತ್ತಿರುವ ಚಳಿಯಿಂದಾಗಿ ನೀರಿನ ಘನೀಕರಣವೇ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಜನರ ಸಮಸ್ಯೆಗಳು ಹೆಚ್ಚಾಗುತ್ತಿವೆ. ರಾತ್ರಿ ವೇಳೆ ತಪ್ಪಿ ನೀರಿನ ಟ್ಯಾಪ್ ಮುಚ್ಚಿದರೆ, ಬೆಳಗ್ಗೆ ಟ್ಯಾಪ್‌ನ ಹೊರಗೆ ಮತ್ತು ಒಳಗೆ ನೀರು ಹೆಪ್ಪುಗಟ್ಟುತ್ತದೆ. ಇದರಿಂದ ನೀರು ಪೂರೈಕೆಯಾಗುತ್ತಿಲ್ಲ ಎಂದು ಬದರಿನಾಥ ಧಾಮದ ಭದ್ರತೆಯಲ್ಲಿ ನಿಯೋಜನೆಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
Last Updated : Feb 3, 2023, 8:34 PM IST