ಮೈತೇಯಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣದೀಪ್ ಹೂಡಾ-ಲಿನ್ ಲೈಶ್ರಾಮ್:ವಿಡಿಯೋ - ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣದೀಪ್ ಹೂಡಾ
By ANI
Published : Nov 30, 2023, 9:39 AM IST
ಇಂಫಾಲ(ಮಣಿಪುರ):ನಟರಣದೀಪ್ ಹೂಡಾ ಮತ್ತು ಲಿನ್ ಲೈಶ್ರಾಮ್ ಅವರು ನಿನ್ನೆ (ನವೆಂಬರ್ 29) ಇಂಫಾಲ್ನ ವೆಸ್ಟ್ ಲಾಂಗ್‌ತಾಬಲ್‌ನಲ್ಲಿರುವ ಚುಮ್ತಾಂಗ್ ಸನಾಪುಂಗ್‌ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೈತೇಯಿ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ಜರುಗಿತು.
ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಲಿನ್ ಮತ್ತು ರಂದೀಪ್ ಮದುವೆಗೂ ಮುನ್ನ ವಿಶೇಶ ಪೂಜೆಯಲ್ಲಿ ಭಾಗಿಯಾದರು. ಮಣಿಪುರ ಶಾಲ್ ಧರಿಸಿ ಕುಟುಂಬ ಸದಸ್ಯರೊಂದಿಗೆ ಫೋಟೋ ತೆಗೆಸಿಕೊಂಡರು. ಲಿನ್ ಸಾಂಪ್ರದಾಯಿಕ ಉಡುಗೆ ತೊಟ್ಟು ಮೈತುಂಬಾ ಒಡವೆ ಹಾಕಿಕೊಂಡು ಮಿಂಚಿದರು. ಬಿಳಿ ಬಣ್ಣದ ಪಂಚೆ, ಶರ್ಟ್ ಧರಿಸಿದ್ದ ರಣದೀಪ್ ಹೂಡಾ ಸುತ್ತ ಸಂಬಂಧಿಕರು ಸುತ್ತುವರೆದಿದ್ದರು.
ಲಿನ್ ಅವರು 2007ರಲ್ಲಿ 'ಓಂ ಶಾಂತಿ ಓಂ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇದರಲ್ಲಿ ಅವರು ಓಂ ಕಪೂರ್ ಅವರ ಸ್ನೇಹಿತೆಯಾಗಿ ಅತಿಥಿ ಪಾತ್ರ ನಿರ್ವಹಿಸಿದ್ದರು. ಬಳಿಕ ಮೇರಿ ಕೋಮ್ (2014), ಉಮ್ರಿಕಾ (2015), ರಂಗೂನ್ (2017), ಖೈದಿ ಬ್ಯಾಂಡ್ (2017) ಮತ್ತು ಆಕ್ಸೋನ್ (2019) ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ, 'ಮಾನ್ಸೂನ್ ವೆಡ್ಡಿಂಗ್' ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ರಣದೀಪ್, 'ವನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ', 'ಸಾಹೇಬ್, ಬಿವಿ ಔರ್ ಗ್ಯಾಂಗ್‌ಸ್ಟರ್', 'ರಂಗ್ ರಸಿಯಾ', 'ಜಿಸ್ಮ್ 2' ಚಿತ್ರಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇದರ ಜೊತೆಗೆ, 'ವೀರ್ ಸಾವರ್ಕರ್' ಚಿತ್ರದಲ್ಲೂ ಸಹ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಸಲಿಂಗ ವಿವಾಹ : ಅಧಿಕೃತವಾಗಿ ನೋಂದಾಯಿಸಿದ ಮೊದಲ ದಕ್ಷಿಣ ಏಷ್ಯಾ ದೇಶ ನೇಪಾಳ