ಕರ್ನಾಟಕ

karnataka

ಬಾರುಕೋಲು ಹಿಡಿದು ಹುಬ್ಬಳ್ಳಿಯ ಕನ್ನಡ ನಾಮಫಲಕ ಬಳಕೆಗೆ ಪ್ರತಿಭಟನೆ

ETV Bharat / videos

ಕನ್ನಡ ನಾಮಫಲಕ ಕ್ರಾಂತಿ: ಬಾರುಕೋಲು ಹಿಡಿದು ಹುಬ್ಬಳ್ಳಿಯಲ್ಲಿ ‌ಪ್ರತಿಭಟನೆ

By ETV Bharat Karnataka Team

Published : Dec 29, 2023, 7:15 PM IST

ಹುಬ್ಬಳ್ಳಿ:ಕನ್ನಡ ನಾಮಫಲಕದ ಹೋರಾಟದ ಕಿಚ್ಚು ವಾಣಿಜ್ಯ ನಗರಿ ಹುಬ್ಬಳ್ಳಿಗೂ ಹಬ್ಬಿದೆ. ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಆಟೋ ಚಾಲಕರ ಸಂಘ ಸೇರಿದಂತೆ ಬಹುತೇಕ ಕನ್ನಡಪರ ಸಂಘಟನೆಗಳ ಹೋರಾಟಗಾರರು ಇಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ವಿಭಿನ್ನ ಹೋರಾಟ ನಡೆಸಿದ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಧೋತಿ ತೊಟ್ಟು, ಬಾರುಕೋಲು ಹಿಡಿದು ಪ್ರತಿಭಟನೆ ನಡೆಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚೆನ್ನಮ್ಮ ವೃತ್ತದ ಮೂಲಕ ಪ್ರತಿಭಟನಾ ರ‍್ಯಾಲಿ ಮಾಡಿದ ಪ್ರತಿಭಟನಾಕಾರರು ಕೆಲಕಾಲ ತಹಶೀಲ್ದಾರ್ ಕಚೇರಿಯೆದುರು ಭಜನೆ ಮಾಡಿ ಗಮನ ಸೆಳೆದರು. ಕನ್ನಡ ನಾಮಫಲಕ ಹಾಕಿದರೆ ಶಾಂತಿ, ಇಲ್ಲದಿದ್ದರೆ ಕ್ರಾಂತಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ನಾಮಫಲಕ ಹಾಕಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಬುಧವಾರದಂದು ವಾಣಿಜ್ಯ ಮಳಿಗೆಗಳು ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಹಾಕುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ದೇವನಹಳ್ಳಿ ಸಾದಹಳ್ಳಿ ಗೇಟ್​ನಿಂದ ಪ್ರತಿಭಟನಾ ಮೆರವಣಿಗೆ ನಡೆದಿತ್ತು.

ಇದನ್ನೂ ಓದಿ:ನಾರಾಯಣ ಗೌಡ ಬಂಧನಕ್ಕೆ ಖಂಡನೆ: ವಿವಿಧೆಡೆ ಕರವೇ ಪ್ರತಿಭಟನೆ

ABOUT THE AUTHOR

...view details