ಕರ್ನಾಟಕ

karnataka

ವಿದ್ಯುತ್ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ: 35 ಜನ ಪ್ರಯಾಣಿಕರಿಗೆ ಗಾಯ

ETV Bharat / videos

ಶಿವಮೊಗ್ಗ: ವಿದ್ಯುತ್ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ: 35 ಜನ ಪ್ರಯಾಣಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು - ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ

By

Published : Aug 2, 2023, 6:16 PM IST

ಶಿವಮೊಗ್ಗ: ಚಲಿಸುತ್ತಿದ್ದ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಬಸ್ಸಿನಲ್ಲಿದ್ದ 35 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಗೆಣಸಿಕುಣಿ ಸಮೀಪ ನಡೆದಿದೆ. ಗಾಯಗೊಂಡಿರುವ ಎಲ್ಲರನ್ನೂ ಸಾಗರ ಪಟ್ಟಣದ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ಇವರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಹೊಳೆಬಾಗಿಲು ಬಳಿಯಿಂದ ಸಾಗರ ಪಟ್ಟಣಕ್ಕೆ ಬರುತ್ತಿದ್ದ ಎಸ್.ಬಿ.ಕೆ. ಹೆಸರಿನ ಖಾಸಗಿ ಬಸ್ ಚಾಲಕ ಅತೀ ವೇಗದ ಚಾಲನೆ ಮಾಡಿದ್ದರಿಂದ ಗೆಣಸಿಕುಣಿ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಬಸ್ಸಿನಲ್ಲಿ, ಒಟ್ಟು 45 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಲೈನ್ ವೈಯರ್ ಬಸ್​ಗೆ ತಾಗಿದ್ದು, ಬಸ್​ನಲ್ಲಿದ್ದ ಒಟ್ಟು 45 ಪ್ರಯಾಣಿಕರ ಪೈಕಿ 35 ಪ್ರಯಾಣಿಕರಿಗೆ ವಿದ್ಯುತ್ ಶಾಕ್ ಉಂಟಾಗಿದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮೈಸೂರು: ಕಾರು ಅಪಘಾತ ಸ್ಥಳದಲ್ಲಿ ವಿದ್ಯುತ್ ತಂತಿ ಸ್ಪರ್ಶ; ಇಬ್ಬರು ಸಾವು, ಮೂವರಿಗೆ ಗಾಯ

ABOUT THE AUTHOR

...view details