ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ- ವಿಡಿಯೋ - Narendra Modi
ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ದೆಹಲಿ ಮೆಟ್ರೋದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸುವ ಮೂಲಕ ದೆಹಲಿ ವಿಶ್ವವಿದ್ಯಾಲಯ (ಡಿಯು) ತಲುಪಿದರು. ತಮ್ಮ ನಿವಾಸದ ಹತ್ತಿರದ ನಿಲ್ದಾಣ ಲೋಕ ಕಲ್ಯಾಣ ಮಾರ್ಗದಿಂದ ಮೆಟ್ರೋ ಮೂಲಕ ವಿವಿಗೆ ಅವರು ತೆರಳಿದರು. ವಿವಿ ಶತಮಾನೋತ್ಸವ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೋದಿ ಭಾಗವಹಿಸಬೇಕಿತ್ತು.
ವಿವಿ ಬಳಿ ಇರುವ ವಿಶ್ವವಿದ್ಯಾಲಯ ಮೆಟ್ರೋ ನಿಲ್ದಾಣದವರೆಗೆ ಮೋದಿ ಅವರು ತಮ್ಮ ಪ್ರಯಾಣದಲ್ಲಿ ನಿರಂತರವಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಿದ್ದರು. ಇದಕ್ಕೂ ಮುನ್ನ ಪ್ರಧಾನಿ ಮೆಟ್ರೋ ಟೋಕನ್ ಖರೀದಿಸಿದರು. ನಂತರ, ಹಳದಿ ಲೈನ್ ಮೆಟ್ರೋ ಹಿಡಿಯಲು ಟೋಕನ್ ಮೂಲಕ ಎಎಫ್‌ಸಿ ಗೇಟ್‌ನಿಂದ ನಿಲ್ದಾಣ ಪ್ರವೇಶ ಪಡೆದರು.
ಪ್ರಧಾನಿ ಮೋದಿ ಟ್ವೀಟ್:"ದೆಹಲಿ ಮೆಟ್ರೋದಿಂದ ದೆಹಲಿ ವಿವಿ ಕಾರ್ಯಕ್ರಮಕ್ಕೆ ಹೋಗುವ ದಾರಿಯಲ್ಲಿ ವಿದ್ಯಾರ್ಥಿಗಳನ್ನು ನನ್ನ ಸಹ- ಪ್ರಯಾಣಿಕರನ್ನಾಗಿ ಹೊಂದಲು ಸಂತೋಷವಾಯಿತು" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:Exclusive: ಲೋಕಸಭೆ ಚುನಾವಣೆಗೆ ಬಿಜೆಪಿ ರಣತಂತ್ರ.. ಪ್ರಧಾನಿ ನಿವಾಸದಲ್ಲಿ 5 ತಾಸು ಸುದೀರ್ಘ ಚರ್ಚೆ