ಸಚಿವ ಸುಧಾಕರ್ ಸೋಲಿಸಿದ ಪ್ರದೀಪ್ ಈಶ್ವರ್.. ಇದು ಜನಸಾಮಾನ್ಯರ ಜಯ ಎಂದ ಪರಿಶ್ರಮ ಅಕಾಡೆಮಿ ಮುಖ್ಯಸ್ಥ - pradeep eshwar
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಸುಧಾಕರ್ ವಿರುದ್ಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರದೀಪ್ ಈಶ್ವರ್ ಗೆಲುವು ಸಾಧಿಸಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಜನಸಾಮಾನ್ಯರ ಗೆಲುವು, ಮಾಜಿ ಸಚಿವ ಸುಧಾಕರ್ ಅವರು ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದರೆ ಯಾಕೆ ಸೋಲುತ್ತಿದ್ದರು..? ಅವರ ಸೋಲಿಗೆ ಎಲ್ಲಾ ಮೈನಸ್ ಕಾರಣಗಳಿವೆ ಎಂದು ಟಾಂಗ್ ಕೊಟ್ಟರು.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಸುಧಾಕರ್ ಅವರು ನೀಟ್ ಅಕಾಡೆಮಿ ತೆರೆಯುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಸೋತ ನಂತರ ಸುಮ್ಮನಿರದೇ ನೀಟ್ ಅಕಾಡೆಮಿ ಸ್ಥಾಪಿಸಬೇಕು. ಇದರಿಂದ ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತದೆ. ಇನ್ನು ನನ್ನ ಗೆಲುವಿಗೆ ಮಾಜಿ ಸಚಿವ ಶಿವಶಂಕರ್ ರೆಡ್ಡಿ ಹಾಗೂ ಚಿಂತಾಮಣಿ ಹಾಲಿ ಶಾಸಕ ಎಂ.ಸಿ. ಸುಧಾಕರ್ ಮುಖ್ಯಕಾರಣಕರ್ತರಾಗಿದ್ದಾರೆ. ಅವರಿಬ್ಬರು ನನಗೆ ದೇವರ ಸಮಾನ. ನನ್ನ ಗೆಲುವಿಗೆ ಶ್ರಮಿಸಿದ ಎಲ್ಲಾ ಬೆಂಬಲಿಗರಿಗೂ ಮತ್ತು ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ. ಕ್ಷೇತ್ರದ ಜನತೆಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಬಗೆಹರಿಸಲಾಗುವುದೆಂದು ಭರವಸೆಯನ್ನು ನೀಡಿದರು.
ಇದನ್ನೂ ಓದಿ:ಕಾಂಗ್ರೆಸ್ನ ಕೈ ಹಿಡಿದ ಐದು 'ಗ್ಯಾರಂಟಿ' ಭರವಸೆಗಳು