ಮನೆ ಬಳಿ ಹುಲ್ಲು ಮೇಯುತ್ತಿದ್ದ 15 ಹಸುಗಳ ಮೇಲೆ ಆ್ಯಸಿಡ್ ಎರಚಿದ ವೃದ್ಧ ಮಹಿಳೆ - ವಿಡಿಯೋ - ETV Bharat Karnataka
Published : Dec 12, 2023, 6:17 PM IST
ನೆಲಮಂಗಲ :ಮನೆ ಬಳಿ ಹುಲ್ಲು ಮೇಯುತ್ತವೆ ಎಂಬ ಕಾರಣಕ್ಕೆ 15ಕ್ಕೂ ಹೆಚ್ಚು ಹಸುಗಳ ಮೇಲೆವೃದ್ಧೆ ಮಹಿಳೆಯೊಬ್ಬಳು ಆ್ಯಸಿಡ್ ಎರಚಿ ಪೈಶಾಚಿಕ ಕೃತ್ಯ ಎಸಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಗ್ರೀಸ್ ಜೋಸೆಫ್ ಎಂಬ ವೃದ್ಧ ಮಹಿಳೆ ಆ್ಯಸಿಡ್ ಎರಚಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವೃದ್ಧೆ ಮಹಿಳೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದು, ಮನೆ ಬಳಿ ಹಸುಗಳು ಹಲ್ಲು ಮೇಯುವುದನ್ನು ಸಹಿಸದ ಆಕೆ, ಹಸುಗಳನ್ನು ಅಲ್ಲಿಂದ ಓಡಿಸಲು ಯತ್ನಿಸಿದ್ದಾಳೆ. ಆದರೆ ಹಸುಗಳು ಅಲ್ಲಿಂದ ತೆರಳಿಲ್ಲ. ಇದರಿಂದ ರೊಚ್ಚಿಗೆದ್ದ ವೃದ್ಧ ಮಹಿಳೆ ಆ್ಯಸಿಡ್ ನನ್ನು ಹಸುಗಳ ಮೇಲೆ ಹಾಕಿದ್ದಾಳೆ. ಈ ಸಂದರ್ಭದಲ್ಲಿ ನಾನೇ ಈ ಕೃತ್ಯ ನೋಡಿ ಮನೆ ಹತ್ತಿರ ಹೋಗುವಷ್ಟರಲ್ಲಿ ವೃದ್ದೆ ಬಾಗಿಲು ಹಾಕಿಕೊಂಡಳು. ಬಳಿಕ ಈ ಘಟನೆ ಬಗ್ಗೆ ಕೇಳಲು ಮನೆ ಬಳಿ ಹೋದಾಗ ಆ್ಯಸಿಡ್ ಎರಚಿರುವ ಬಗ್ಗೆ ಒಪ್ಪಿಕೊಂಡಿದ್ದಾಳೆ ಎಂದು ಪ್ರತ್ಯಕ್ಷದರ್ಶಿ ನಾಗಪ್ಪ ಹೇಳಿದರು.
ಕಳೆದ 20 ದಿನಗಳಿಂದ ನಿತ್ಯ ಮೇವಿಗಾಗಿ ಹೊರಟ ಹಸುಗಳ ಬೆನ್ನು, ಹೊಟ್ಟೆ ಭಾಗದ ಮೇಲೆ ಒಂದು ರೀತಿಯ ದ್ರವ ಸೋರಿದ ಹಾಗೆ ಗಾಯ ಗೊಂಡಿವೆ. ಇದು ಏನೋ ರೋಗದ ಲಕ್ಷಣ ಇರಬೇಕು ಎಂದು ವೈದ್ಯರಿಗೆ ತೋರಿಸಿ ಚಿಕಿತ್ಸೆ ನೀಡಿದ್ದೇವೆ. ಆದರೆ, ಹಸುಗಳ ಮೇಲೆ ಆ್ಯಸಿಡ್ ಹಾಕುವುದನ್ನು ಕಣ್ಣಾರೇ ಕಂಡ ನಾಗಪ್ಪ ವಿಷಯವನ್ನು ತಿಳಿಸಿದ್ದಾರೆ. ಬಳಿಕ ವೃದ್ದೆಯನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಸ್ಥಳೀಯರಾದ ಗಂಗಮ್ಮ ತಿಳಿಸಿದರು.
ಇದನ್ನೂ ಓದಿ :ಶಾರ್ಟ್ ಸರ್ಕ್ಯೂಟ್‌ನಿಂದ ಸ್ಕ್ರ್ಯಾಪ್ ಗೋದಾಮಿಗೆ ಬೆಂಕಿ: ವಿಡಿಯೋ