ಚಿಕ್ಕಬಳ್ಳಾಪುರ: ಟವರ್ ಏರಿ ನ್ಯಾಯಕ್ಕೆ ಮೊರೆಯಿಟ್ಟ 60 ರ ವೃದ್ಧ - ಜಮೀನು ವಿಚಾರವಾಗಿ ಟವರ್ ಏರಿದ ವೃದ್ಧ
ಚಿಕ್ಕಬಳ್ಳಾಪುರ: ಜಮೀನು ವಿವಾದ ಸಂಬಂಧ ನ್ಯಾಯಕ್ಕಾಗಿ ಆಗ್ರಹಿಸಿ 60 ವರ್ಷದ ವೃದ್ಧನೊಬ್ಬ ವೈರ್‌ಲೆಸ್ ಟವರ್ ಏರಿ ಹೈಡ್ರಾಮಾ ನಡೆಸಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ಗುರುಕುಲನಾಗೇನಹಳ್ಳಿ ನಿವಾಸಿ ನರಸಿಂಹಯ್ಯ ನಗರದ ಪತ್ರಕರ್ತರ ಭವನದ ಬಳಿ ಇರುವ ಕಂದಾಯ ಇಲಾಖೆಗೆ ಸೇರಿದ ಟವರ್ ಹತ್ತಿ ಆತ್ಮಹತ್ಯೆ ಬೆದರಿಕೆ ಹಾಕಿದ್ದಾನೆ. ಜಮೀನು ವ್ಯಾಜ್ಯದಿಂದ ಬೇಸತ್ತಿದ್ದ ಈತ ಎಸಿ ಹಾಗೂ ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕೆ ಬಂದು ನ್ಯಾಯ ದೊರಕಿಸಿಕೊಡುವವರೆಗೂ ಟವರ್ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದ. ನಂತರ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ವೃದ್ಧನಿಗೆ ಸಾಂತ್ವನ ಹೇಳಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
Last Updated : Feb 3, 2023, 8:25 PM IST