ಮಧ್ಯರಾತ್ರಿ ಬಸ್ ಅಡ್ಡಹಾಕಿ ಕಿಡಿಗೇಡಿಗಳ ಅಟ್ಟಹಾಸ: ಕೆಎಸ್ಆರ್ಟಿಸಿ ಬಸ್‌ಗಳ ಗಾಜು ಪುಡಿಪುಡಿ - ಕೆಎಸ್ಆರ್ಟಿಸಿ ಬಸ್
Published : Jan 17, 2024, 2:15 PM IST
|Updated : Jan 17, 2024, 4:36 PM IST
ಬೆಂಗಳೂರು: ಆಟೋ ರಿಕ್ಷಾದಲ್ಲಿ ಬಂದ ಪುಂಡರ ಗುಂಪೊಂದು ಎರಡು ಕೆಎಸ್ಆರ್ಟಿಸಿ ಬಸ್‌ಗಳ ಗಾಜುಗಳನ್ನು ಒಡೆದಿರುವ ಘಟನೆ ಮೆಜೆಸ್ಟಿಕ್ ಬಳಿ ಮಂಗಳವಾರ ಮಧ್ಯರಾತ್ರಿ ನಡೆದಿದೆ. ರಾತ್ರಿ ಹೊತ್ತು ಆಟೋ ರಿಕ್ಷಾದಲ್ಲಿ ಬಂದಿದ್ದ ನಾಲ್ಕೈದು ಜನ ಕಿಡಿಗೇಡಿಗಳು, ಮೆಜೆಸ್ಟಿಕ್ ಬಳಿ ಬೆಂಗಳೂರು - ಮೈಸೂರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ಅಡ್ಡಗಟ್ಟಿದ್ದಾರೆ. ಬಸ್ ನಿಲ್ಲಿಸಿದಾಗ ನೋಡನೋಡುತ್ತಿದ್ದಂತೆ ಬಸ್‌ಗಳ ಕಿಟಕಿ ಗಾಜುಗಳನ್ನು ದೊಣ್ಣೆಯಿಂದ ಹೊಡೆದು ಪುಡಿ ಮಾಡಿದ್ದಾರೆ.
ಬಸ್‌ಗಳು ಮಾತ್ರವಲ್ಲದೇ ಎರಡು ಕಾರು, ಆಟೋಗಳ ಗಾಜುಗಳನ್ನು ಸಹ ಒಡೆದು ಅಟ್ಟಹಾಸ ಮೆರೆದಿದ್ದಾರೆ. ಮದ್ಯದ ಅಮಲಿನಲ್ಲಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಇಬ್ಬರು ಆರೋಪಿಗಳಾದ ರಿಯಾಜ್ ಹಾಗೂ ಇಮ್ರಾನ್ ನನ್ನು ಕಾಟನ್ ಪೇಟೆ ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಮಾಹಿತಿ ತಿಳಿದು ಬಂದಿದೆ. ಆಟೋದಲ್ಲಿ ಐವರು ಆರೋಪಿಗಳ ತಂಡ ಬಂದಿದ್ದು, ಕಬ್ಬಿಣದ ರಾಡ್ಗಳನ್ನು ಸಹ ತಂದಿದ್ದರು. ಅದರಲ್ಲೇ ಬಸ್‌ಗಳ ಗಾಜುಗಳನ್ನು ಪುಡಿ ಮಾಡಿದ್ದಾರೆ ಎಂದು ಬಸ್ ಚಾಲಕ ಹಾಗೂ ನಿರ್ವಾಹಕರು ಆರೋಪಿಸಿದ್ದಾರೆ.
ಇದನ್ನೂ ನೋಡಿ:ಮನೆ ಬಾಗಿಲು ಮೀಟಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು