ಕರ್ನಾಟಕ

karnataka

ಬೋನಿಗೆ ಬಿದ್ದ ಚಿರತೆ

ETV Bharat / videos

ನೆಲಮಂಗಲ: ಉಪಟಳ ನೀಡುತ್ತಿದ್ದ ಚಿರತೆ ಬೋನಿನಲ್ಲಿ ಸೆರೆ - ಈಟಿವಿ ಭಾರತ ಕನ್ನಡ

By

Published : Mar 15, 2023, 1:44 PM IST

ನೆಲಮಂಗಲ:ಹಲವು ದಿನಗಳಿಂದ ನೆಲಮಂಗಲದಲ್ಲಿ ಜನ, ಜಾನುವಾರುಗಳಿಗೆ ಉಪಟಳ ನೀಡುತ್ತಿದ್ದ ಚಿರತೆಯೊಂದು ಇಲ್ಲಿಯ ಮಲ್ಲರಬಾಣವಾಡಿಯಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆ‌ ಅಳವಡಿಸಿದ್ದ ಬೋನಿನಲ್ಲಿ ಎರಡೂವರೆ ವರ್ಷದ ಗಂಡು ಚಿರತೆ ಬಿದ್ದಿದೆ. ಸೆರೆ ಸಿಕ್ಕ ಚಿರತೆ ನೆಲಮಂಗಲ ನಗರದ ಅಕ್ಕಪಕ್ಕದ ಗ್ರಾಮಗಳಲ್ಲಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿತ್ತು. ಗ್ರಾಮಗಳಲ್ಲಿ ಮನೆಗಳ ಮುಂದೆ ಕಟ್ಟಲಾಗಿದ್ದ ನಾಯಿ, ದನಕರುಗಳ ಮೇಲೆ ದಾಳಿ ಮಾಡಿ ಹೊತ್ತೊಯ್ಯುತ್ತಿತ್ತು. ಇದರಿಂದ ಆತಂಕಗೊಂಡಿದ್ದ ಜನರು ಹೊರಹೋಗಲು ಹಿಂದೇಟು ಹಾಕುತ್ತಿದ್ದರು. 

ಚಿರತೆ ಸೆರೆ ಹಿಡಿಯುವಂತೆ ಮಲ್ಲರಬಾಣವಾಡಿ ನಿವಾಸಿಗಳು ಅರಣ್ಯಾಧಿಕಾರಿಗಳನ್ನು ಆಗ್ರಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ಮುಂದಾದ ಇಲಾಖೆ ಮಲ್ಲರಬಾಣವಾಡಿಯಲ್ಲಿ ಬೋನು ಇಟ್ಟಿದ್ದರು. ಕಳೆದ ರಾತ್ರಿ ಆಹಾರ ಅರಸಿ‌ ನಗರಕ್ಕೆ ಬಂದ ಚಿರತೆ ಬೋನಿಗೆ ಬಿದ್ದಿದೆ. ಈ ಬೋನಿನ ಒಂದು ಬದಿ ನಾಯಿಯನ್ನು ಕಟ್ಟಲಾಗಿತ್ತು. ಇದೀಗ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ನೆಲಮಂಗಲ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವನ್ಯಜೀವಿಯನ್ನು ಚಾಮರಾಜನಗರದ ಅರಣ್ಯಕ್ಕೆ ರವಾನಿಸಿದ್ದಾರೆ.

ಇದನ್ನೂ ಓದಿ:ವಿದ್ಯಾರ್ಥಿಯನ್ನು ಬಲಿ ಪಡೆದಿದ್ದ ಚಿರತೆ ಸೆರೆ: ನಿಟ್ಟುಸಿರು ಬಿಟ್ಟ ಜನ...

ABOUT THE AUTHOR

...view details