ಹಾಸನ: ಗ್ರಾಮಕ್ಕೆ ನುಗ್ಗಿದ ಚಿರತೆ ಬೇಟೆ ಸಿಗದೇ ವಾಪಸ್.. ಜನರಲ್ಲಿ ಆತಂಕ - ವಿಡಿಯೋ
Published : Sep 28, 2023, 5:07 PM IST
ಹಾಸನ:ಹಾಸನದಲ್ಲಿ ದಿನದಿಂದ ದಿನಕ್ಕೆ ಚಿರತೆ ಹಾವಳಿ ಹೆಚ್ಚಾಗುತ್ತಿದೆ. ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ಚಿರತೆ ಮನೆಯ ಮುಂದೆ ಆಗಮಿಸಿ ವಾಪಸ್ ಹೋಗಿದೆ. ತಾಲೂಕಿನ ಮಾಯಗೊಂಡನಹಳ್ಳಿ ಗ್ರಾಮದ ಜಗದೀಶ್ ಎಂಬುವರ ಮನೆಯ ಮುಂದೆ ಚಿರತೆಯೊಂದು ನಾಯಿಯನ್ನು ಹೊತ್ತೊಯ್ಯಲು ಬಂದು ನಂತರ ಬೇಟೆ ಸಿಗದೇ ವಾಪಸ್ ಆಗಿದೆ. ಈ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿರತೆ ಮನೆ ಮುಂದೆ ಬಂದು, ಏನನ್ನೋ ಬೇಟೆಯಾಡಿ, ಎತ್ತೊಯ್ಯಲು ಪ್ರಯತ್ನಿಸುತ್ತಿರುವುದು, ಬೇಟೆ ಸಾಧ್ಯವಾಗದೆ ಮತ್ತೆ ಹಿಂತಿರುಗಿ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು, ಚಿರತೆ ಬಂದು ಹೋಗಿರುವುದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಗ್ರಾಮಕ್ಕೆ ಚಿರತೆ ಬಂದು ಹೋಗುತ್ತಿರುವುದರ ಬಗ್ಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಚಿರತೆ ಹಿಡಿಯಲು ಮುಂದಾಗುತ್ತಿಲ್ಲ. ಕೂಡಲೇ ಈ ಪ್ರಕರಣದಿಂದಲಾದರೂ ಎಚ್ಚೆತ್ತು ಅರಣ್ಯಾಧಿಕಾರಿಗಳು ಚಿರತೆ ಬೋನು ಇಟ್ಟು ಅದನ್ನು ಕೂಡಲೇ ಸೆರೆ ಹಿಡಿದು ಸ್ಥಳಾಂತರ ಮಾಡಬೇಕು ಎಂದು ಗ್ರಾಮದ ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ :ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಕಾರ್ಮಿಕರು