ಬಾಲಸೋರ್ ರೈಲು ದುರಂತ ಸ್ಥಳದ ಇಂದಿನ ವೈಮಾನಿಕ ದೃಶ್ಯ - ಈಟಿವಿ ಭಾರತ ಕನ್ನಡ
ಒಡಿಶಾ:ಶುಕ್ರವಾರ ಬಾಲಾಸೋರ್ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ 275ಕ್ಕೂ ಜನ ಸಾವನ್ನಪ್ಪಿದ್ದರೆ, 1000ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ಘಟನೆಯಿಂದಾಗಿ ಅಲ್ಲಿನ ರೈಲು ಹಳಿಯೂ ಸಂಪೂರ್ಣವಾಗಿ ಹಾಳಾಗಿತ್ತು ಇದರಿಂದ ಆ ಮಾರ್ಗದ ರೈಲು ಸಂಚಾರವನ್ನು ರದ್ದುಗೊಳಿಸಲಾಗಿತ್ತು. 90 ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನೂ ರದ್ದು ಮಾಡಲಾಗಿತ್ತು. ಇದೀಗ ರೈಲು ಹಳಿ ರಿಪೇರಿ ಕಾರ್ಯ ಮುಕ್ತಾಯಗೊಂಡಿದ್ದು, ರೈಲು ಸಂಚಾರ ಪುನಾರಂಭಿಸಲಾಗಿದೆ. ಇದರ ವೈಮಾನಿಕ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.
ಸದ್ಯ ಎರಡೂ ರೈಲು ಹಳಿಗಳನ್ನು ದುರಸ್ತಿಪಡಿಸಲಾಗಿದೆ. ಘಟನೆ ನಂತರ ಎರಡು ದಿನಗಳ ಬಳಿಕ ಪೂರ್ವ ಮತ್ತು ದಕ್ಷಿಣ ಭಾರತವನ್ನು ಸಂಪರ್ಕಿಸುವ ಮುಖ್ಯ ಲೈನ್ನ ಮೇಲೆ ಬಿದ್ದಿದ್ದ ರೈಲು ಕೋಚ್ಗಳನ್ನು ಬುಲ್ಡೋಜರ್ ಮತ್ತು ಕ್ರೇನ್ ಸಹಾಯದಿಂದ ಮೇಲೆತ್ತಿ ಹಳಿಗಳನ್ನು ಸರಿಪಡಿಸಲಾಗಿದೆ.
ಇನ್ನುಓವರ್ಹೆಡ್ ವಿದ್ಯುದ್ದೀಕರಣ ಕಾರ್ಯವೂ ಪ್ರಾರಂಭಿಸಲಾಗಿದೆ. ಮೇಲ್ಮುಖ ವಿದ್ಯುತ್ ಕೇಬಲ್‌ಗಳನ್ನು ಮರುಸ್ಥಾಪಿಸುವ ಕೆಲಸವು ಆರಂಭವಾಗಿದೆ. ಹಳಿಗಳ ದುರಸ್ತಿ ಕಾರ್ಯ ಮುಗಿದ ನಂತರ ಮೊದಲಿಗೆ ಹಳಿ ಮೇಲೆ ಗೂಡ್ಸ್ ರೈಲು ಸಂಚಾರ ಆರಂಭಿಸಿತ. ಗೂಡ್ಸ್ ರೈಲು ಸಂಚಾರದ ವೇಳೆ ಅಲ್ಲೇ ಇದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೈಮುಗಿದು, ರೈಲಿಗೆ ಶುಭಕೋರಿದರು.
ಇದನ್ನೂ ಓದಿ:ಒಡಿಶಾ ರೈಲು ದುರಂತ.. ಸಂತ್ರಸ್ತ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಗೌತಮ್ ಅದಾನಿ