ತಡೆಗೋಡೆ ನಿರ್ಮಾಣದ ವೇಳೆ ಸಮುದ್ರಕ್ಕೆ ಉರುಳಿದ ಜೆಸಿಬಿ: ವಿಡಿಯೋ ವೈರಲ್ - Etv Bharat Kannada
ಕೋಯಿಕ್ಕೋಡ್ (ಕೇರಳ):ಕಾಮಗಾರಿ ವೇಳೆ ಜೆಸಿಬಿಯೊಂದು ಸಮುದ್ರಕ್ಕೆ ಉರುಳಿ ಬಿದ್ದಿರುವ ಘಟನೆ ಜಿಲ್ಲೆಯ ಕೋಠಿ ಅಳಿವೆಯಲ್ಲಿ ನಡೆದಿದೆ. ಸಮುದ್ರ ತಡೆಗೋಡೆ ನಿರ್ಮಾಣ ಕಾರ್ಯದ ವೇಳೆ ಜೆಸಿಬಿ ಪಲ್ಟಿಯಾಗಿ ಸಮುದ್ರಕ್ಕೆ ಬಿದ್ದಿದೆ. ಘಟನೆಯಲ್ಲಿ ಜೆಸಿಬಿ ಆಪರೇಟರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇಂದು ಬೆಳಗ್ಗೆ 10.20ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ತಡೆಗೋಡೆ ನಿರ್ಮಾಣ ಕಾರ್ಯದ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದರು. ಈ ವೇಳೆ, ಸಮುದ್ರದ ತುದಿಯಲ್ಲಿದ್ದ ಜೆಸಿಬಿ ಅಚಾನಕಾಗಿ ಸಮುದ್ರಕ್ಕೆ ಉರುಳಿ ಬಿದ್ದಿದೆ. ಘಟನೆಯ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ನಿರಂತರ ಕಾರ್ಯಾಚರಣೆ ನಡೆಸಿ ಸಮುದ್ರಕ್ಕೆ ಬಿದ್ದ ಜೆಸಿಬಿಯನ್ನು ಕ್ರೇನ್ ಸಹಾಯದ ಮೂಲಕ ಮೇಲಕ್ಕೆತ್ತಿದ್ದಾರೆ. ಸದ್ಯ ಜೆಸಿಬಿ ಸಮೇತ ಸಮುದ್ರಕ್ಕೆ ಬಿದ್ದಿರುವ ಆಪರೇಟರ್‌ಗೆ ದೊಡ್ಡ ಪ್ರಮಾಣದ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಚಂಬಲ್ ನದಿಗೆ ಉರುಳಿದ ಮದುವೆಗೆ ತೆರಳುತ್ತಿದ್ದ ಕಾರು: ಮದುಮಗ ಸೇರಿ 9 ಮಂದಿ ಸಾವು