ಕರ್ನಾಟಕ

karnataka

10 ಸಾವಿರ ರೂಪಾಯಿ ಠೇವಣಿಯನ್ನು ನಾಣ್ಯಗಳಲ್ಲಿ ಪಾವತಿಸಿದ ಪಕ್ಷೇತರ ಅಭ್ಯರ್ಥಿ

ETV Bharat / videos

ನಾಣ್ಯಗಳಲ್ಲೇ 10 ಸಾವಿರ ರೂ ಠೇವಣಿ ಪಾವತಿಸಿದ ಪಕ್ಷೇತರ ಅಭ್ಯರ್ಥಿ

By

Published : Apr 18, 2023, 6:12 PM IST

ಯಾದಗಿರಿ :ಯಾದಗಿರಿ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಯಂಕಪ್ಪ ದೇವಿಂದ್ರಪ್ಪ ರಾಮಸಮುದ್ರ ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ನಗರದ ತಹಶೀಲ್​​​ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ, ಚುನಾವಣಾ ಠೇವಣಿ ಹಣವಾಗಿ 10 ಸಾವಿರ ಮೌಲ್ಯದ ನಾಣ್ಯಗಳನ್ನು ಪಾವತಿ ಮಾಡಿದರು. ಈ ಠೇವಣಿ ಹಣ ಕಂಡು ಒಂದು ಕ್ಷಣ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಬಳಿಕ 4 ಜನ ಸಿಬ್ಬಂದಿ ನಾಣ್ಯಗಳನ್ನು ಎಣಿಕೆ ಮಾಡಿದರು. 

ಮೂಲತಃ ರಾಮಸಮುದ್ರ ಗ್ರಾಮದವರಾಗಿರುವ ಯಂಕಪ್ಪ ಎಂಎ ಪದವೀಧರ. ಸಮಾಜದಲ್ಲಿರುವ ಕೆಲವು ಅನಿಷ್ಟ ಪದ್ಧತಿಗಳನ್ನು ತೊಲಗಿಸಿ, ಸಮಾನತೆಯ ಸಾಮರಸ್ಯದ ಸಮಾಜ ನಿರ್ಮಾಣಕ್ಕಾಗಿ ಯಾದಗಿರಿ ಮತಕ್ಷೇತ್ರದ ಹಳ್ಳಿಗಳಿಗೆ ಹಾಗೂ ತಾಂಡಾಗಳಿಗೆ ತೆರಳಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಯಂಕಪ್ಪ, ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇನೆ. ಪ್ರತಿ ಹಳ್ಳಿಯ ಮಕ್ಕಳಿಗೆ ಶಿಕ್ಷಣ, ಯುವಜನರ ಸೇವೆಗಾಗಿ ಅಂಬೇಡ್ಕರ್ ಮತ್ತು ವಿವೇಕಾನಂದರ ಹೆಸರಲ್ಲಿ ನನ್ನ ಒಂದು ಎಕರೆ ಜಮೀನನ್ನು ದೇಣಿಗೆ ನೀಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ :₹10 ಸಾವಿರ ಠೇವಣಿಯನ್ನು ನಾಣ್ಯಗಳಲ್ಲೇ ಪಾವತಿಸಿದ ಆಮ್​ ಆದ್ಮಿ ಅಭ್ಯರ್ಥಿ- ವಿಡಿಯೋ

ABOUT THE AUTHOR

...view details