ಅಕ್ರಮ ಮದ್ಯ ಮಾರಾಟ.. ಬೀದಿಗಿಳಿದು ಹೋರಾಟ ನಡೆಸಿದ ಹೊರಳವಾಡಿ ಗ್ರಾಮಸ್ಥರು - ಈಟಿವಿ ಭಾರತ್ ಕನ್ನಡ ನ್ಯೂಸ್
ಮೈಸೂರು : ಅಕ್ರಮ ಮದ್ಯ ಮಾರಾಟದ ವಿರುದ್ಧ ಬೀದಿಗಿಳಿದ ಮಹಿಳೆಯರು ಮತ್ತು ಯುವಕರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊರಳವಾಡಿ ಗ್ರಾಮದಲ್ಲಿ ಭಾನುವಾರ ಹೋರಾಟ ನಡೆಸಿದ್ದಾರೆ. ಅಂಬೇಡ್ಕರ್ ಭವನದಲ್ಲಿ ಮದ್ಯಪಾನ ವ್ಯಸನ ವಿರೋಧಿ ಅಭಿಯಾನ ಜನಜಾಗೃತಿ ಕಾರ್ಯಕ್ರಮಕ್ಕೆ ಬಿಳಿಗೆರೆ ಪೊಲೀಸ್ ಠಾಣೆಯ ಪಿಎಸ್ಐ ಶಿವರಾಜ್ ಚಾಲನೆ ನೀಡಿದರು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮದ್ಯಪಾನದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿ ಜಾಥ ನಡೆಸಿದರು. ಗ್ರಾಮದಲ್ಲಿ 8 ಕಡೆ ಆಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಶಾಂತಿ ಸುವ್ಯವಸ್ಥೆ ಹಾಳಾಗಿದೆ. ಗ್ರಾಮಸ್ಥರು ಹೆಚ್ಚಾಗಿ ಮದ್ಯ ಸೇವನೆ ಮಾಡುತ್ತಿರುವುದರಿಂದ ಮನೆ ಮತ್ತು ಗ್ರಾಮದಲ್ಲಿ ಗಲಾಟೆಗಳು ನಡೆಯುತ್ತಿವೆ. ಇತ್ತೀಚೆಗೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ನಮ್ಮೂರಿನ ಹಲವು ಪ್ರಕರಣ ದಾಖಲಾಗುತ್ತಿವೆ.
ಗ್ರಾಮದಲ್ಲಿ ಯಾವುದೇ ಶುಭ ಕಾರ್ಯ ಮಾಡಿದರು ಕುಡಿದು ಅಡ್ಡಿಪಡಿಸುತ್ತಿದ್ದಾರೆ. ನಮಗೆ ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ. ಕೂಡಲೇ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಿ, ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಹಾಗು ಅಂಬೇಡ್ಕರ್ ಸಂಘದ ಕಾರ್ಯದರ್ಶಿ ವೀರಭದ್ರಸ್ವಾಮಿ ಒತ್ತಾಯಿಸಿದರು.
ಇದನ್ನೂ ಓದಿ :ಅವಧಿ ಮುಗಿದ ₹13 ಕೋಟಿ ಮೌಲ್ಯದ ಮದ್ಯ ರೋಡ್ ರೋಲರ್ ಹತ್ತಿಸಿ ನಾಶ: ವಿಡಿಯೋ