ಕರ್ನಾಟಕ

karnataka

jds

ETV Bharat / videos

ಶಾಸಕ ಶ್ರೀನಿವಾಸ್ ಹಂಚ್ತಿರುವ ಕುಕ್ಕರ್ ಸ್ಫೋಟಗೊಳ್ತಿವೆ: ಜೆಡಿಎಸ್ ಅಭ್ಯರ್ಥಿ ನಾಗರಾಜ್ - Cooker explosion

By

Published : Feb 23, 2023, 8:11 PM IST

ತುಮಕೂರು:ಗುಬ್ಬಿ ವಿಧಾನಸಭೆ ಕ್ಷೇತ್ರದಲ್ಲಿ ಉಚ್ಛಾಟಿತ ಜೆಡಿಎಸ್ ಶಾಸಕ ಎಸ್​.ಆರ್.‌ಶ್ರೀನಿವಾಸ್ ಮತದಾರರಿಗೆ ಕುಕ್ಕರ್ ಹಂಚಿಕೆ ಮಾಡುತ್ತಿದ್ದು ತಾಲೂಕಿನಲ್ಲಿ ನಾಲ್ಕೈದು ಕಡೆ ಸ್ಫೋಟಗೊಂಡಿದೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜ್​ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಶಾಸಕ ಶ್ರೀನಿವಾಸ್ ಕಳಪೆ ಗುಣಮಟ್ಟದ ಕುಕ್ಕರ್ ಹಂಚುತಿದ್ದಾರೆ. ಕುಕ್ಕರ್ ಹಂಚುತಿದ್ದುದನ್ನು ನೋಡಿ ಜನರೇ ಬಿದ್ದು ಬಿದ್ದು ನಗುತ್ತಾರೆ. ನಮ್ಮ ಮನೆಯಲ್ಲಿ ನಾಲ್ಕೈದು ಕುಕ್ಕರ್ ಇದೆ, ಈ ಯಪ್ಪ ಮತ್ತೆ ಕುಕ್ಕರ್ ಕೊಡ್ತಾನೆ ಎಂದು ಹೇಳುತ್ತಿದ್ದಾರೆ. ಕುಕ್ಕರ್ ಬ್ಲಾಸ್ಟ್‌ ಆಗಿರುವ ವರದಿಯಾಗಿದೆ, ಜನರ ಸೇಫ್ಟಿ ಮುಖ್ಯ, ದಯವಿಟ್ಟು ಈ ಕುಕ್ಕರ್ ಬಳಸಬೇಡಿ" ಎಂದು ಮನವಿ ಮಾಡಿದರು. 

"150-200 ರೂ. ಮೌಲ್ಯದ ಕುಕ್ಕರ್ ಕೊಟ್ಟು ಜನರನ್ನು ಮೂರ್ಖರನ್ನಾಗಿಸುತಿದ್ದಾರೆ. ಇದರಿಂದ ಆಗುವ ಅನಾಹುತಕ್ಕೆ‌ ಶಾಸಕ‌ ಶ್ರೀನಿವಾಸ್ ಹೊಣೆ" ಎಂದು ಶಾಸಕರ ವಿರುದ್ದ ಕಿಡಿ ಕಾರಿದರು.

ಇದನ್ನೂ ಓದಿ:ಜೆಡಿಎಸ್​​ಗೆ ನೀಡುವ ಒಂದೊಂದು ಮತವೂ ಕಾಂಗ್ರೆಸ್​ಗೆ ಹೋಗುತ್ತದೆ: ಅಮಿತ್​ ಶಾ

ABOUT THE AUTHOR

...view details