ಉಚಿತ ಟಿಫಿನ್ ಬಾಕ್ಸ್ಗೆ ಮುಗಿಬಿದ್ದ ಮಹಿಳೆಯರು; ವಿಡಿಯೋ ವೈರಲ್ - ಬಿಜೆಪಿ ಉಪಾಧ್ಯಕ್ಷೆ ಸೋನಾಲಿ ಸರ್ನೋಬತ್
ಬೆಳಗಾವಿ: ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ನವ ದುರ್ಗಾ ಹಳದಿ ಕುಂಕುಮ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಚಿತ ಟಿಫಿನ್ ಬಾಕ್ಸ್ ತೆಗೆದುಕೊಳ್ಳಲು ಮಹಿಳೆಯರು ಮುಗಿಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಕಾರ್ಯಕ್ರಮ ನಡೆದಿದ್ದು, ಬಳಿಕ ಶಾಸಕಿ ನೆರೆದಿದ್ದ ಮಹಿಳೆಯರಿಗೆ ಉಚಿತ ಟಿಫಿನ್ ಬಾಕ್ಸ್ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇತ್ತ ಮಹಿಳೆಯರು ಟಿಫಿನ್ ಬಾಕ್ಸ್ ಪಡೆಯಲು ಮುಗಿಬಿದ್ದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಗ್ರಾಮೀಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಸೋನಾಲಿ ಸರ್ನೋಬ್, ಖಾನಾಪೂರ ಕ್ಷೇತ್ರದಲ್ಲಿ ಟಿಫಿನ್ ಬಾಕ್ಸ್ ಅಷ್ಟೇ ಅಲ್ಲ ಸೀರೆಗಳನ್ನು ಹಂಚಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Last Updated : Feb 3, 2023, 8:33 PM IST