ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿನ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ವಿಡಿಯೋ - Saraswathipuram in Mysore city
ಮೈಸೂರು :ನಗರದ ಹೊರವಲಯದಲ್ಲಿ ಇರುವ ಹೆಬ್ಬಾಳ ಕೈಗಾರಿಕಾ ಪ್ರದೇಶದ ಪಟಾಕಿ ದಾಸ್ತಾನು ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇದರಿಂದ ಇಡೀ ಕಾರ್ಖಾನೆ ಬೆಂಕಿಗೆ ಆಹುತಿಯಾಗಿದೆ. ಈ ಬೆಂಕಿ ಸುತ್ತಮುತ್ತಲಿನ ನಾಲ್ಕು ಕಾರ್ಖಾನೆಗಳಿಗೆ ಹರಡಿದ್ದು, ಸ್ಥಳಕ್ಕೆ ಸುಮಾರು 15 ಅಗ್ನಿಶಾಮಕ ದಳ ವಾಹನಗಳು ಬಂದು ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾಗಿವೆ.
ಇದನ್ನೂ ಓದಿ:ಶಾರ್ಟ್ ಸರ್ಕ್ಯೂಟ್ ಶಂಕೆ: ಅಗ್ನಿಗಾಹುತಿಯಾದ ಮೊಬೈಲ್ ಅಂಗಡಿ
ಬೆಂಕಿ ನಂದಿಸಲು ಹರಸಾಹಸಪಟ್ಟ ಅಗ್ನಿಶಾಮಕ ಸಿಬ್ಬಂದಿ: ಮೈಸೂರು ನಗರದ ಸರಸ್ವತಿಪುರಂ ಅಗ್ನಿ ಶಾಮಕ ಠಾಣೆಯ ಮೂರು ಅಗ್ನಿ ಶಾಮಕ ವಾಹನಗಳು, ಬನ್ನಿಮಂಟಪದ 3, ಹೆಬ್ಬಾಳದ 3, ಆರ್ಬಿಐನ ಎರಡು, ಹುಣಸೂರು ನಗರದ ಒಂದು, ಟಿ ನರಸೀಪುರದ ಒಂದು, ಕೆ ಆರ್ ನಗರದ ಒಂದು ಹಾಗೂ ಶ್ರೀರಂಗಪಟ್ಟಣದ ಒಂದು ಅಗ್ನಿಶಾಮಕ ವಾಹನ ಬೆಂಕಿಯನ್ನು ನಂದಿಸಲು ಹರಸಾಹಸಪಡುತ್ತಿದ್ದಾರೆ. ಈ ಬೆಂಕಿ ಅವಘಡ ಸಂಭವಿಸಿರುವ ಸ್ವಲ್ಪ ದೂರದಲ್ಲೇ ಇನ್ಫೋಸಿಸ್ ಕ್ಯಾಂಪಸ್ ಸಹ ಇದೆ.
ಇದನ್ನೂ ಓದಿ:ಪೊಲೀಸ್ ಠಾಣೆ ಆವರಣದಲ್ಲಿ ಅಗ್ನಿ ಅವಘಡ: 61 ವಾಹನಗಳಿಗೆ ಹಾನಿ