ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಹಿಂದಿನ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್
ಧಾರವಾಡ : ಹಿಂದಿ ಭಾಷೆ ಉತ್ತೇಜನಕ್ಕೆ ನೀಡಿದ್ದ ಅನುದಾನ ದುರ್ಬಳಕೆ ಆರೋಪದ ಹಿನ್ನೆಲೆ ಸಿಬಿಐನಿಂದ ಎಫ್‌ಐಆರ್ ದಾಖಲಾಗಿದೆ. ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಹಿಂದಿನ ಆಡಳಿತ ಮಂಡಳಿ ವಿರುದ್ಧ ಇದೀಗ ಎಫ್‌ಐಆರ್ ದಾಖಲಿಸಲಾಗಿದೆ.
ಮಾಜಿ ಕಾರ್ಯಾಧ್ಯಕ್ಷ ಶಿವಯೋಗಿ ನೀರಲಕಟ್ಟಿ ಮತ್ತು ಇತರರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ 5.78 ಕೋಟಿ ರೂ. ಹಿಂದಿ ಭಾಷೆ ಕಲಿಕಾ ಉತ್ತೇಜನ ನೀಡಿದ್ದರು. ಅದನ್ನು ಅನ್ಯ ಉದ್ದೇಶಕ್ಕೆ ಆಡಳಿತ ಮಂಡಳಿ ಬಳಸಿಕೊಂಡಿತ್ತು. ಶಿಕ್ಷಣ ಸಚಿವಾಲಯದ ಜಾಗೃತ ಅಧಿಕಾರಿ ನೀತಾ ಪ್ರಸಾದ್ ಅವರಿಂದ ದೂರು ಸಲ್ಲಿಕೆಯಾಗಿತ್ತು. ಕಳೆದ ವರ್ಷದ ಫೆಬ್ರವರಿಯಲ್ಲಿ ಸಿಬಿಐಗೆ ದೂರು ಸಲ್ಲಿಕೆಯಾಗಿತ್ತು.
ಈ ಬಗ್ಗೆ ಮಧುರೈ ಭ್ರಷ್ಟಾಚಾರ ನಿಗ್ರಹ ದಳ ಪ್ರಾಥಮಿಕ ತನಿಖೆ ನಡೆಸಿತ್ತು. ಈ ತನಿಖೆ ಆಧರಿಸಿ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಈ ಹಿಂದೆ ಸಂಸ್ಥೆಯ ಅಧ್ಯಕ್ಷರಾಗಿದ್ದ ಆರ್. ಎಫ್ ನೀರಲಕಟ್ಟಿ, ಕಾರ್ಯಾಧ್ಯಕ್ಷರಾಗಿದ್ದ ಶಿವಯೋಗಿ ನೀರಲಕಟ್ಟಿ ಮೇಲೆ ದೂರು ದಾಖಲಾಗಿದೆ.
ಓದಿ : ಆರ್. ಡಿ. ಪಾಟೀಲ್ ಆಡಿಯೋ: ತನಿಖಾಧಿಕಾರಿಯ ತಪ್ಪಿದ್ದರೆ ನಿರ್ದಾಕ್ಷಿಣ್ಯ ಕ್ರಮ- ಸಿಎಂ ಬೊಮ್ಮಾಯಿ