ಪಾಕಿಸ್ತಾನದಲ್ಲಿ ಎಂಬಿಬಿಎಸ್ ಸೀಟ್ ಹಂಚಿಕೆ ಪ್ರಕರಣ, ಮೂರು ಕಡೆ ಕಾಶ್ಮೀರದ ಪ್ರತ್ಯೇಕತಾವಾದಿಗಳ ಮನೆ ಮೇಲೆ ಇಡಿ ದಾಳಿ - ಜಾಫರ್ ಭಟ್ ಮನೆ ಮೇಳೆ ಇಡಿ ದಾಳಿ
ಶ್ರೀನಗರ (ಜಮ್ಮು ಕಾಶ್ಮೀರ):ಪಾಕಿಸ್ತಾನದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟ್ಗಳ ಹಂಚಿಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮೊತ್ತ ಪಡೆದಿರುವ ಪ್ರತ್ಯೇಕತಾವಾದಿ ನಾಯಕ ಖಾಜಿ ಯಾಸಿರ್ ಮತ್ತು ಜಮ್ಮು ಕಾಶ್ಮೀರ ಸಾಲ್ವೇಶನ್ ಆಂದೋಲನ ಅಧ್ಯಕ್ಷ ಜಾಫರ್ ಭಟ್ ಅವರ ಮನೆಗಳ ಮೇಲೆ ದಾಳಿ ಸೇರಿ ಒಟ್ಟು ಮೂರು ಕಡೆ ಜಾರಿ ನಿರ್ದೇಶನಾಲಯ ತನಿಖಾ ಸಂಸ್ಥೆ (ಇಡಿ) ಗುರುವಾರ ಬೆಳಗ್ಗೆ ದಾಳಿ ನಡೆಸಿದೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಖಾಜಿ ಮೊಹಲ್ಲಾದಲ್ಲಿ ಇರುವ ಹುರಿಯತ್ ನಾಯಕ ಖಾಜಿ ಯಾಸಿರ್ ಅವರ ಮನೆ ಮೇಲೆ ಏಕಾಎಕಿ ದಾಳಿ ಮಾಡಿರುವ ಕೇಂದ್ರ ತನಿಖಾ ಸಂಸ್ಥೆ ಇಡಿ, ಸಿಆರ್ಪಿಎಫ್ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಶೋಧನೆ ನಡೆಸಿದ್ದಾರೆ.
ಇದೇ ಸಮಯದಲ್ಲಿ ಮತ್ತೊಂದು ಕಡೆ ಜಮ್ಮು ಕಾಶ್ಮೀರ ಸಾಲ್ವೇಶನ್ ಮೂವ್ಮೆಂಟ್ ಅಧ್ಯಕ್ಷ ಜಾಫರ್ ಅಕ್ಬರ್ ಭಟ್ ಅವರ ನಿವಾಸ ಮನೆ ಮೇಲೆಯೂ ದಾಳಿ ನಡೆದಿದೆ. ಮತ್ತೊಂದು ತಂಡವೂ ಶ್ರೀನಗರ ಪ್ರದೇಶದ ಬಾಗ್ ಮಹತಾಬ್‌ನಲ್ಲಿರುವ ಹುರಿಯತ್ ನಾಯಕ ಸೈಯದ್ ಖಾಲಿದ್ ಗಿಲಾನಿ ಅವರ ಮನೆಯನ್ನೂ ಇಡಿ ಅಧಿಕಾರಿಗಳು ಶೋಧನೆ ಮಾಡಿದ್ದಾರೆ.
ಪಾಕಿಸ್ತಾನದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ಎಂಬಿಬಿಎಸ್ ಸೀಟ್ಗಳ ಹಂಚಿಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮೊತ್ತ ಪಡೆದಿರುವ ಆರೋಪವಿದ್ದು, ಈ ಹಿನ್ನೆಲೆ ದಾಳಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂಓದಿ:Explained: ಇಂಡೋನೇಷ್ಯಾ ತನ್ನ ರಾಜಧಾನಿ ಬದಲಾಯಿಸುತ್ತಿರೋದೇಕೆ?