ದಸರಾ ಮ್ಯಾರಥಾನ್: 4 ಕಿ.ಮೀ ಓಡಿದ ಚಾಮರಾಜನಗರ ಡಿಸಿ ಶಿಲ್ಪಾನಾಗ್ - DC Shilpanag Participated in Marathon
Published : Oct 18, 2023, 11:35 AM IST
ಚಾಮರಾಜನಗರ :ಚಾಮರಾಜನಗರ ದಸರಾ ಪ್ರಯುಕ್ತ ಇಂದು ನಗರದಲ್ಲಿ ಜಿಲ್ಲಾ ಮಟ್ಟದ ಮ್ಯಾರಥಾನ್ ಸ್ಪರ್ಧೆ ನಡೆಯಿತು. ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ಮ್ಯಾರಥಾನ್ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸ್ಪರ್ಧಿಗಳ ಜೊತೆ ತಾವೂ ಕೂಡ ಮ್ಯಾರಥಾನ್ನಲ್ಲಿ ಭಾಗವಹಿಸಿದರು.
ಚಾಮರಾಜೇಶ್ವರ ದೇವಾಲಯದಿಂದ ಹೊರಟ ಈ ಮ್ಯಾರಥಾನ್, ಜೋಡಿ ರಸ್ತೆ, ಕೋರ್ಟ್ ರಸ್ತೆ ಮೂಲಕ ಚಾಮರಾಜನಗರ ಪ್ರವಾಸಿ ಮಂದಿರದಲ್ಲಿ ಕೊನೆಗೊಂಡಿತು. ಡಿಸಿ ಅವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಸಾತ್ ನೀಡಿದರು. ಮ್ಯಾರಥಾನ್ ನಡೆಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ನಾನೂ ಕೂಡ ಮ್ಯಾರಥಾನ್ ಪಟು. ಕೆಲಸದ ಒತ್ತಡದಿಂದ ಅಥ್ಲೀಟ್ನಲ್ಲಿ ಭಾಗಿಯಾಗಿರಲಿಲ್ಲ. ನಮ್ಮ ಚಾಮರಾಜನಗರ ಆರೋಗ್ಯಯುತ ಚಾಮರಾಜನಗರ ಆಗಬೇಕು. ಜಿಲ್ಲಾದ್ಯಂತ ದಸರಾ ಸಂಭ್ರಮ ಕಳೆಗಟ್ಟಿದ್ದು ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಮ್ಯಾರಥಾನ್ ಜೊತೆಗೆ ಇತರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಪ್ಲಾಗಾಥಾನ್ ಹಮ್ಮಿಕೊಳ್ಳುವ ಮೂಲಕ ಪರಿಸರ ಕಾಳಜಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಹೇಳಿದರು. 20 ರಂದು ಪ್ರಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ :ಮೈಸೂರು ದಸರಾ: ಗಮನಸೆಳೆದ ಕರಾವಳಿಯ ಚೆಂಡೆವಾದನ- ವಿಡಿಯೋ