ಕರ್ನಾಟಕ

karnataka

ನಮ್ಮದು ಪ್ರಧಾನಿ ನರೇಂದ್ರ ಮೋದಿ ಸಂಸ್ಕೃತಿ: ಸಿಎಂ ಬೊಮ್ಮಾಯಿ

By

Published : Feb 10, 2023, 5:48 PM IST

Updated : Feb 14, 2023, 11:34 AM IST

cm

ಹುಬ್ಬಳ್ಳಿ:ಯಾರ್ಯಾರ್ದು ಯಾರ ಸಂಸ್ಕೃತಿ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ನಮ್ದು ಮೋದಿ ಸಂಸ್ಕೃತಿ ಎಂದು ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಹೇಳಿದರು. ಲಕ್ಕುಂಡಿ ಉತ್ಸವಕ್ಕೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್‌ನವರದ್ದು ಟಿಪ್ಪು ಸಂಸ್ಕೃತಿ, ನಮ್ದು ನಾಲ್ವಡಿ ಕೃಷ್ಣರಾಜರ ಸಂಸ್ಕೃತಿ ಎಂಬ ಸಿ.ಟಿ.ರವಿ ಹೇಳಿಕೆ ಪ್ರತಿಕ್ರಿಯಿಸಿ, ನನ್ನ ಪ್ರಕಾರ ನಮ್ದು ಪ್ರಧಾನಿ ನರೇಂದ್ರ ಮೋದಿ ಸಂಸ್ಕೃತಿ ಎಂದರು.

ಮೋದಿ ಭಾರತವನ್ನು ಅತ್ಯಂತ ಸಶಕ್ತವಾಗಿ ಶ್ರೀಮಂತವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರು ಅಮೃತ ಕಾಲವನ್ನು ಕರ್ತವ್ಯ ಕಾಲ ಎಂದು ಕರೆದಿದ್ದಾರೆ. ಕರ್ತವ್ಯದ ಮೂಲಕ ದೇಶವನ್ನು ಇಡೀ ಜಗತ್ತಿನಲ್ಲಿ ಸರ್ವ ಶ್ರೇಷ್ಠವನ್ನಾಗಿಸಲು ಹೊರಟಿದ್ದಾರೆ. ಈ ಧ್ಯೇಯ ಇಟ್ಟುಕೊಂಡು ನಾವು ಆಡಳಿತ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಮಂಡ್ಯ ಉಸ್ತುವಾರಿ ಸ್ಥಾನದಿಂದ ಆರ್.ಅಶೋಕ್‌ ಬಿಡುಗಡೆ: ಸಿಎಂ ಬೊಮ್ಮಾಯಿ

Last Updated : Feb 14, 2023, 11:34 AM IST

ABOUT THE AUTHOR

...view details