ಕರ್ನಾಟಕ

karnataka

ಮಳೆಗಾಗಿ ಮಲೆನಾಡ ಜನರಿಂದ ವಿಶೇಷ ಪೂಜೆ

ETV Bharat / videos

ಮಳೆಗಾಗಿ ಪ್ರಾರ್ಥಿಸಿ 37 ವರ್ಷಗಳಷ್ಟು ಹಿಂದಿನ ಪೂಜೆಯ ಮೊರೆ ಮಲೆನಾಡ ಜನ- ವಿಡಿಯೋ

By ETV Bharat Karnataka Team

Published : Sep 3, 2023, 10:34 AM IST

ಚಿಕ್ಕಮಗಳೂರು:ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸೆಪ್ಟೆಂಬರ್ ಮೊದಲ ವಾರದ ವೇಳೆಗೆ ವಾಡಿಕೆಯಂತೆ ಶೇ 50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯಬೇಕಿತ್ತು. ಆದರೆ, ಈ ಬಾರಿ ಮಳೆರಾಯ ಅಪರೂಪದ ಅತಿಥಿಯಂತಾಗಿದ್ದು ಶೇ 44ರಷ್ಟು ಮಳೆ ಕೊರತೆ ಉಂಟಾಗಿದೆ. ರೈತರು ಬೆಳೆ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಅಳೇಹಳ್ಳಿ, ಹೆನ್ನಂಗಿ, ಬೆಳ್ಳಂಗಿ ಗ್ರಾಮದ ನೂರಾರು ಜನರು ಮಳೆಗಾಗಿ ಪ್ರಾರ್ಥಿಸಿ, 37 ವರ್ಷದ ಹಿಂದಿನ ಪೂಜೆಯ ಮೊರೆ ಹೋಗಿದ್ದಾರೆ. 

ಮೂರು ಹಳ್ಳಿಯ ನೂರಾರು ಜನರು ಬಾಳೆಹೊನ್ನೂರು ಸಮೀಪದ ಪರದೇಶಪ್ಪನ ಮಠದ ಗುರುಗಳ ನೇತೃತ್ವದಲ್ಲಿ ಗಂಗೇಗಿರಿ ಬೆಟ್ಟ ಹತ್ತಿ ಪೂಜೆ ಸಲ್ಲಿಸಿ ಮಳೆಗಾಗಿ ಬೇಡಿಕೊಂಡರು. ಈ ಆಚರಣೆ ಕಳೆದ 37 ವರ್ಷಗಳ ಹಿಂದೆ ನಡೆದಿತ್ತಂತೆ. ಇದೀಗ ಮಳೆ ಅಭಾವ ಉಂಟಾಗಿರುವುದರಿಂದ ಮಲೆನಾಡಿಗರು ಮತ್ತೆ ಗಂಗೇಗಿರಿ ಬೆಟ್ಟ ಹತ್ತಿದ್ದಾರೆ. ಜನರು ಸ್ವಾಮೀಜಿಯ ನೇತೃತ್ವದಲ್ಲಿ ಬೆಟ್ಟಕ್ಕೆ ತೆರಳಿ ಜಲಪೂಜೆ ಮಾಡಿದರು. ಮಡಿಯಲ್ಲಿ ಅಲ್ಲಿಂದ ಜಲ ತಂದು 9 ದಿನಗಳ ಕಾಲ ಕಟ್ಟುನಿಟ್ಟಾಗಿ ಪೂಜೆ ಸಲ್ಲಿಸಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. 

ಇದನ್ನೂ ಓದಿ:ಹಾವೇರಿಯಲ್ಲಿ ಬಾರದ ಮಳೆ: ಬೆಳೆ ನಾಶ... ರಾಸುಗಳ ಮಾರಾಟ... ಹೇಳತೀರದು ಅನ್ನದಾತನ ಸಂಕಷ್ಟ 

ABOUT THE AUTHOR

...view details