ಚಂದ್ರಗ್ರಹಣ ಹಿನ್ನೆಲೆ ಸಂಜೆಯೊಳಗೆ ಮುಗಿದ ಚಾಮುಂಡೇಶ್ವರಿ ತೆಪ್ಪೋತ್ಸವ
Published : Oct 28, 2023, 11:04 PM IST
ಮೈಸೂರು:ಚಂದ್ರಗ್ರಹಣದ ಹಿನ್ನೆಲೆ ಚಾಮುಂಡಿ ಬೆಟ್ಟದ ದೇವಿ ಕೆರೆಯಲ್ಲಿ ಚಾಮುಂಡೇಶ್ವರ ತೆಪ್ಪೋತ್ಸವವನ್ನು ಶಣಿವಾರ ಸಂಜೆಯೊಳಗೆ ನೆರವೇರಿಸಲಾಯಿತು.
ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ತರುತ್ತಿದ್ದಂತೆ ದೇವಸ್ಥಾನದ ಬಾಗಿಲನ್ನು ಮುಚ್ಚಲಾಯಿತು. ದೇವಾಲಯದಲ್ಲಿ ಗ್ರಹಣಕ್ಕೂ ಮುನ್ನ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ದಸರಾ ಅಂಗವಾಗಿ ನಡೆಯುವ ವಿಜಯದಶಮಿ ಮೆರವಣಿಗೆ ನಂತರ ಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವದ ನಂತರ ತೆಪ್ಪೋತ್ಸವವನ್ನು ಆಯೋಜಿಸುವುದು ಸಂಪ್ರದಾಯ. ಪ್ರತಿ ಬಾರಿಯೂ ಕತ್ತಲಾದ ನಂತರ ತೆಪ್ಪೋತ್ಸವ ನಡೆಯುತ್ತಿತ್ತು. ಈ ಬಾರಿ ಚಂದ್ರಗ್ರಹಣದ ಕಾರಣದಿಂದಾಗಿ ಸಂಜೆ 5ಕ್ಕೆ ಸರಿಯಾಗಿ ತೆಪ್ಪೋತ್ಸವ ನೆರವೇರಿಸಲಾಯಿತು.
ಬೆಟ್ಟದಲ್ಲಿ ಶನಿವಾರ ಬೆಳಗ್ಗೆ ಚಾಮುಂಡೇಶ್ವರ ದೇವಿಗೆ ವಸಂತಪೂಜೆ ನೆರವೇರಿಸಲಾಯಿತು. ಬಳಿಕ ಅವಭೃತ ತೀರ್ಥಸ್ನಾನ ಹಾಗೂ ಮಂಟಪೋತ್ಸವ ನಡೆಯಿತು. ಬಳಿಕ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿಟ್ಟು ತೆಪ್ಪೋತ್ಸವ ನೆರವೇರಿಸಿ, ವಿಶೇಷ ಪೂಜಾ ಕಾರ್ಯ ನೆರವೇರಿಸಲಾಯಿತು.
ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಸಂಜೆ 6ರೊಳಗೆ ಮೂರ್ತಿಯನ್ನು ದೇವಸ್ಥಾನಕ್ಕೆ ವಾಪಸ್ ತರಲಾಯಿತು. ಅ.29ರಂದು ಭಾನುವಾರ ಬೆಳಗ್ಗೆ 7.30ರಿಂದ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರಲಿದೆ.
ಇದನ್ನೂಓದಿ:ಕುಮಾರಸ್ವಾಮಿ ಭ್ರಷ್ಟಾಚಾರದ ಬಗ್ಗೆ ಆಣೆ ಮಾಡುವುದಾದರೆ ನಾವು ಸಿದ್ಧ: ಸಚಿವ ಎನ್ ಚಲುವರಾಯಸ್ವಾಮಿ