ಕರ್ನಾಟಕ

karnataka

ಸರಗಳ್ಳರ ದೃಶ್ಯ ಸೆರೆ

ETV Bharat / videos

ಸಿನಿಮೀಯ ರೀತಿಯಲ್ಲಿ ಸರಗಳ್ಳರನ್ನು ಓಡಿಸಿದ ಸ್ಥಳೀಯ; ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಈಟಿವಿ ಭಾರತ ಕನ್ನಡ

By

Published : Apr 20, 2023, 2:26 PM IST

ಬೆಂಗಳೂರು: ಬೈಕ್​ನಲ್ಲಿ ಬಂದು ವೃದ್ದೆಯ ಸರಗಳ್ಳತನ ಮಾಡಿದ್ದ ಕಳ್ಳರಿಬ್ಬರು ಬೈಕ್ ಬಿಟ್ಟು ಪರಾರಿಯಾದ ಘಟನೆ ಏಪ್ರಿಲ್ 18 ರಂದು ಬೆಳಗ್ಗೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸರಗಳ್ಳತನ ಮಾಡಿ ಪರಾರಿಯಾಗುವ ಯತ್ನದಲ್ಲಿದ್ದವರನ್ನ ಸ್ಥಳೀಯರೊಬ್ಬರು ಸಿನಿಮೀಯ ರೀತಿಯಲ್ಲಿ ಹಿಡಿಯಲು ಯತ್ನಿಸಿದಾಗ ಬೈಕ್ ಬಿಟ್ಟು ಖದೀಮರು ಪರಾರಿಯಾಗಿದ್ದಾರೆ.

ಮಂಗಳವಾರ ಬೆಳಗ್ಗೆ 7.15ರ ಸುಮಾರಿಗೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ವೃದ್ದೆಯೊಬ್ಬರನ್ನ ಆರೋಪಿಗಳು ಬೈಕಿನಲ್ಲಿ ಹಿಂಬಾಲಿಸಿದ್ದಾರೆ. ಬಳಿಕ ಒಬ್ಬ ಬೈಕ್​​ನಿಂದ ಕೆಳಗಿಳಿದು ವೃದ್ದೆಯ ಸರ ಕಸಿದು‌ ವಾಪಸ್ ಬಂದು ಬೈಕ್ ಹತ್ತುವಷ್ಟರಲ್ಲಿ ಅಲ್ಲೇ ಮನೆಯ ಬಳಿ ನಿಂತಿದ್ದ ಸ್ಥಳೀಯರೊಬ್ಬರು ಓಡಿ‌ ಬಂದು ಬೈಕ್​ ಅನ್ನು ಕೆಳಕ್ಕೆ ಬೀಳಿಸಿದ್ದಾರೆ. ಕೆಳಗೆ ಬಿದ್ದ ಸರಗಳ್ಳರು ಬೈಕ್​ ಅನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಅಲ್ಲದೇ ಇಬ್ಬರು ಸರಗಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೇ ಇಬ್ಬರು ಕಳ್ಳರು ಪರಾರಿಯಾಗಿದ್ದು, ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಸಿ.ಸಿ ಟಿವಿ ದೃಶ್ಯಗಳನ್ನ ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ:ಕೊಲೆ ಪ್ರಕರಣದಲ್ಲಿ ಕಸ್ಟಡಿಯಿಂದ ತಪ್ಪಿಸಿಕೊಂಡ: 17 ವರ್ಷದ ಬಳಿಕ ಕಳ್ಳತನ ಪ್ರಕರಣದಲ್ಲಿ ಬಂಧನ

ABOUT THE AUTHOR

...view details