ಮಲ್ಲೇಶ್ವರದಿಂದ ಡಾ ಸಿ ಎನ್ ಅಶ್ವತ್ಥನಾರಾಯಣ್ ಆಯ್ಕೆ: ಕಾರ್ಯಕರ್ತರ ಸಂಭ್ರಮ - ಸರ್ವಾಂಗೀಣ ಅಭಿವೃದ್ಧಿ
ಬೆಂಗಳೂರು : ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ಡಾ ಸಿ ಎನ್ ಅಶ್ವತ್ಥನಾರಾಯಣ್ ಗೆಲುವನ್ನು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಶನಿವಾರ ಸಂಭ್ರಮಿಸಿದರು. ಮಲ್ಲೇಶ್ವರದಲ್ಲಿರುವ ಶಾಸಕರ ಕಚೇರಿ ಬಳಿ ಜಮಾಯಿಸಿದ ಹೆಚ್ಚಿನ ಸಂಖ್ಯೆಯ ಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಇದನ್ನೂ ಓದಿ:ಸಚಿವ ಸುಧಾಕರ್ ಸೋಲಿಸಿದ ಪ್ರದೀಪ್ ಈಶ್ವರ್.. ಇದು ಜನಸಾಮಾನ್ಯರ ಜಯ ಎಂದ ಪರಿಶ್ರಮ ಅಕಾಡೆಮಿ ಮುಖ್ಯಸ್ಥ
ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತೇನೆ: ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥ್ನಾರಾಯಣ್, ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಕ್ಷೇತ್ರದ ಜನತೆಗೆ ಧನ್ಯವಾದ ಸಲ್ಲಿಸಿದರು. ಕ್ಷೇತ್ರದ ವಿಧಾನಸಭಾ ಪ್ರತಿನಿಧಿಯಾಗಿ ಇಲ್ಲಿಗೆ ಏನೇನು ಕೆಲಸಗಳು ಆಗಬೇಕಿದೆಯೋ ಅದನ್ನು ಮುಂದುವರಿಸುತ್ತೇನೆ. ರಸ್ತೆ, ನೀರು, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಇಲ್ಲಿನ ಸರ್ವಾಂಗೀಣ ಅಭಿವೃದ್ಧಿಗೆ ಈ ಹಿಂದಿನಂತೆಯೇ ಒತ್ತು ನೀಡುತ್ತೇನೆ ಎಂದು ಹೇಳಿದರು. ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.
ಇದನ್ನೂ ಓದಿ:ಪ್ರಿಯಾಂಕ್ ಖರ್ಗೆಗೆ ಹ್ಯಾಟ್ರಿಕ್ ಗೆಲುವು: ಮಣಿಕಂಠ ರಾಠೋಡ್ ವಿರುದ್ಧ 13,638 ಮತಗಳ ಅಂತರದ ಜಯ