PV Sindhu: ಗೋಲ್ಡನ್ ಟೆಂಪಲ್ಗೆ ಭೇಟಿ ಕೊಟ್ಟ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು - ಈಟಿವಿ ಭಾರತ್ ಕರ್ನಾಟಕ
Published : Sep 3, 2023, 8:35 PM IST
ಅಮೃತಸರ (ಪಂಜಾಬ್) :ಒಲಂಪಿಕ್ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಅವರು ತಮ್ಮ ತಂದೆ ಪಿ ವಿ ರಮಣ ಅವರೊಂದಿಗೆ ಪಂಜಾಬ್ನ ಅಮೃತಸರದಲ್ಲಿರುವ ಸಚ್‌ಖಂಡ್ ಶ್ರೀ ದರ್ಬಾರ್ ಸಾಹಿಬ್ (ಗೋಲ್ಡನ್ ಟೆಂಪಲ್)ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇತ್ತೀಚೆಗೆ ಆಟದಲ್ಲಿ ಸತತ ವೈಫಲ್ಯ ಕಾಣುತ್ತಿರುವ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಟೋಕಿಯೋ ಒಲಂಪಿಕ್ಸ್ಗೆ ಸಿದ್ಧತೆ ನಡೆಸುತ್ತಿದ್ದಾರೆ.
ದೇವರ ದರ್ಶನ ಪಡೆದು ಬಳಿಕ ಮಾತನಾಡಿದ ಪಿ ವಿ ಸಿಂಧು ಅವರು, ಸಚ್‌ಖಂಡ್ ಶ್ರೀ ದರ್ಬಾರ್ ಸಾಹಿಬ್‌ಗೆ ಮೊದಲ ಬಾರಿಗೆ ಪೂಜೆ ಸಲ್ಲಿಸಲು ಬಂದಿದ್ದೇನೆ. ಇಲ್ಲಿಗೆ ಬಂದ ನಂತರ ನನ್ನ ಮನಸ್ಸು ತುಂಬಾ ಶಾಂತವಾಗಿದೆ ಎಂದು ಹೇಳಿದರು. ಶೀಘ್ರದಲ್ಲೇ ಮತ್ತೆ ಇಲ್ಲಿಗೆ ಬಂದು ನಮಸ್ಕರಿಸುವ ಅವಕಾಶವನ್ನು ದೇವರು ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ. ಸದ್ಯದಲ್ಲಿಯೇ ಒಲಿಂಪಿಕ್ಸ್ ಆರಂಭವಾಗಲಿದ್ದು, ಅದಕ್ಕಾಗಿ ಕಠಿಣ ತಯಾರಿ ನಡೆಸುತ್ತಿದ್ದೇನೆ. ಅಲ್ಲದೆ ಪ್ರತಿಯೊಬ್ಬರು ಆರೋಗ್ಯವಂತರಾಗಿರಲು ವ್ಯಾಯಾಮ ಮಾಡಬೇಕು ಎಂದು ಸಿಂಧು ಸಲಹೆ ನೀಡಿದರು.
ಇದನ್ನೂ ಓದಿ :ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಒಲಿಂಪಿಕ್ ಕಂಚು ವಿಜೇತೆ ಲವ್ಲೀನಾ