ಕರ್ನಾಟಕ

karnataka

ನೀಲಕಂಠ ಪರ್ವತದಲ್ಲಿ ಹಿಮಪಾತ... ಹಿಮರಾಶಿಯ ದೃಶ್ಯ ಸೆರೆ

ETV Bharat / videos

ನೀಲಕಂಠ ಪರ್ವತದಲ್ಲಿ ಹಿಮಪಾತ.. ಹಿಮರಾಶಿಯ ದೃಶ್ಯ ಸೆರೆ

By

Published : May 15, 2023, 10:33 PM IST

ಉತ್ತರಾಖಂಡ​​: ಬದರೀನಾಥ ಧಾಮ್​​​ ಬಳಿಯ ಸತೋಪಂಥ್​​​​ನಲ್ಲಿರುವ ನೀಲಕಂಠ ಪರ್ವತದಲ್ಲಿ ಹಿಮಪಾತ ಸಂಭವಿಸಿದೆ. ಸತೋಪಂಥ್ ಟ್ರೆಕ್​​ಗೆ​​ ತೆರಳಿದ್ದ ಜನರು ಹಿಮರಾಶಿಯ ದೃಶ್ಯವನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ. ಹಿಮಪಾತದಿಂದ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ ಎಂದು ವರದಿ ಆಗಿದೆ.

ಸತೋಪಂಥ್​​​ ತಾಲ್ ಎಂಬ ಪ್ರದೇಶ ಚಮೋಲಿ ಜಿಲ್ಲೆಯ ಒಂದು ಸುಂದರವಾದ ಸ್ಥಳವಾಗಿದ್ದು, ಸಾಕಷ್ಟು ಹಿಮನದಿಗಳಿಂದ ಕೂಡಿದೆ. ಸತೋಪಂಥ್​​ ಭಾರತದ ಮೊದಲ ಗ್ರಾಮವಾದ 'ಮನ' ದಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿದೆ. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರು ಮತ್ತು ಪ್ರವಾಸಿಗರು ಆಗಮಿಸುತ್ತಾರೆ. ಇತ್ತೀಚೆಗಷ್ಟೇ ಹವಾಮಾನ ಇಲಾಖೆ ಹಿಮಪಾತದ ಬಗ್ಗೆ ಮುನ್ಸೂಚನೆ ನೀಡಿತ್ತು. 

ಯಾತ್ರಾರ್ಥಿ ನೊಂದಣಿ ನಿಷೇಧ : ಹವಾಮಾನ ವೈಪರೀತ್ಯದಿಂದಾಗಿ ಕೇದಾರನಾಥ ಯಾತ್ರೆಗೆ ಈ ಹಿಂದೆ ಮೇ 15 ರವರೆಗೆ ಹೊಸ ನೋಂದಣಿಯನ್ನು ನಿಷೇಧಿಸಲಾಗಿತ್ತು. ಇದೀಗ ಮೇ 25ರ ವರೆಗೆ ಇದ ಮುಂದೂಡಲಾಗಿದೆ. ಮೇ 26 ರಿಂದ ಮತ್ತೆ ಹೊಸ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. 

ಇದನ್ನೂ ಓದಿ :ಚಾರ್ಧಾಮ್​ ಯಾತ್ರೆ 2023: ಉಖಿಮಠದಿಂದ ಕೇದಾರನಾಥ ದೇವಸ್ಥಾನಕ್ಕೆ ಡೋಲಿ ಯಾತ್ರೆ

ABOUT THE AUTHOR

...view details