ಕರ್ನಾಟಕ

karnataka

ಬೆಂಗಳೂರಿನಲ್ಲಿ ಮುಂದುವರೆದ ಪುಂಡರ ಹಾವಳಿ

ETV Bharat / videos

ಬೆಂಗಳೂರಲ್ಲಿ ಮುಂದುವರೆದ ಪುಂಡರ ಹಾವಳಿ: ಯುವಕನ ಅಡ್ಡಗಟ್ಟಿ ಹಲ್ಲೆ - young man robbed in Bengaluru

By ETV Bharat Karnataka Team

Published : Nov 12, 2023, 1:21 PM IST

ಬೆಂಗಳೂರು:ನಗರದಲ್ಲಿ ಪುಂಡರ ಹಾವಳಿ ಮುಂದುವರೆದಿದೆ. ಕೆಲಸ ಮುಗಿಸಿ ಮನೆಗೆ ಹೊರಟವನನ್ನು ದೋಚಲು ಮುಂದಾದ ಕಿಡಿಗೇಡಿಗಳು, ಏಕಾಏಕಿ ಆತನ ಮೇಲೆರಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಪುಲಿಕೇಶಿ ನಗರ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. 

ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಸ್ಸೋಂ ಮೂಲದ ಮನೋಜ್ ಎಂಬಾತ ರಾತ್ರಿ ಮನೆಗೆ ಹೊರಟಿದ್ದ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಕಿಡಿಗೇಡಿಗಳು ಮಾರಕಾಸ್ತ್ರದಿಂದ ಆತನ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಇತ್ತೀಚೆಗೆ ವಾಹನಗಳ ಮೇಲೆ ಪುಂಡರ ದಾಳಿ: ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ಪುಂಡರ ಗುಂಪೊಂದು ಮನೆ ಮುಂದೆ ನಿಲ್ಲಿಸಲಾಗಿದ್ದ ಹತ್ತಕ್ಕೂ ಅಧಿಕ ವಾಹನಗಳ ಗಾಜು ಪುಡಿ ಮಾಡಿರುವ ಘಟನೆ ಗುರುವಾರ ರಾತ್ರಿ ಲಗ್ಗೆರೆಯ ರಾಜೀವ್ ಗಾಂಧಿನಗರದಲ್ಲಿ ನಡೆದಿತ್ತು. ಮಧ್ಯರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂವರು ಆರೋಪಿಗಳು ಮನೆ ಮುಂದೆ ನಿಲ್ಲಿಸಲಾಗಿದ್ದ ವಾಹನಗಳಿಗೆ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹೊಡೆದು ಗಾಜುಗಳನ್ನು ಒಡೆದು ಪರಾರಿಯಾಗಿದ್ದರು.

ಇದನ್ನೂ ಓದಿ :ಬೆಂಗಳೂರು : ಮದ್ಯದ ಅಮಲಿನಲ್ಲಿ ನಡು ರಸ್ತೆ ಮೇಲೆ ಬಡಿದಾಡಿಕೊಂಡ ಯುವಕರು

ABOUT THE AUTHOR

...view details