ಸಾಗರ ಪೊಲೀಸ್ ಠಾಣೆಗೆ ನುಗ್ಗಿದ ಬುಸ್ ಬುಸ್ ನಾಗಪ್ಪ - Shimoga
ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಗರ ಹಾವೊಂದು ಪ್ರತ್ಯಕ್ಷವಾಗಿದ್ದು, ಠಾಣೆಯಲ್ಲಿದ್ದವರನ್ನು ಗಲಿಬಿಲಿಗೊಳಿಸಿದೆ. ಸುಮಾರು 5 ಅಡಿ ಉದ್ದದ ನಾಗರ ಹಾವು, ಠಾಣೆಗೆ ದೂರು ನೀಡಲು ಬಂದಿದ್ದ ವ್ಯಕ್ತಿಯ ನೆರಳಿನಲ್ಲಿ ಇದ್ದದ್ದು ಗೋಚರಿಸಿದೆ. ತಕ್ಷಣ ಪೊಲೀಸರು ಸಾಗರದ ಉರಗ ರಕ್ಷಕ ಅನೂಪ್ರನ್ನು ಕರೆಸಿ ನಾಗರ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ. ಇದರಿಂದ ಠಾಣ ಸಿಬ್ಬಂದಿ ಮತ್ತು ದೂರು ನೀಡಲು ಬಂದವರು ನಿಟ್ಟುಸಿರು ಬಿಟ್ಟಿರು.
Last Updated : Feb 3, 2023, 8:33 PM IST