ಕರ್ನಾಟಕ

karnataka

ಮೀನುಗಾರರ ರಕ್ಷಣೆ

ETV Bharat / videos

ಬೋಟ್ ಇಂಜಿನ್ ಹಾಳಾಗಿ ಅಪಾಯದಲ್ಲಿದ್ದ 26 ಮೀನುಗಾರರ ರಕ್ಷಣೆ: ವಿಡಿಯೋ - ​ ETV Bharat Karnataka

By ETV Bharat Karnataka Team

Published : Dec 5, 2023, 11:03 PM IST

ಕಾರವಾರ(ಉತ್ತರ ಕನ್ನಡ): ಬೋಟ್ ಇಂಜಿನ್ ಹಾಳಾದ ಕಾರಣ ಅರಬ್ಬಿ ಸಮುದ್ರದಲ್ಲಿ ಕೆಲ ದಿನಗಳಿಂದ ಅಪಾಯದಲ್ಲಿದ್ದ 26 ಮೀನುಗಾರರು ಹಾಗೂ ಬೋಟ್‌ ಅನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಪತ್ತೆ ಮಾಡಿದ್ದು, ಮಂಗಳವಾರ ರಾತ್ರಿ ನಗರದ ಬೈತಖೋಲ್ ಬಂದರಿಗೆ ಸುರಕ್ಷಿತವಾಗಿ ತಲುಪಿದ್ದಾರೆ. ನಗರಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮೀನುಗಾರರಿಂದ ಮಾಹಿತಿ ಪಡೆದಿದ್ದಾರೆ.

ಗೋವಾದ ಪಣಜಿ ಮೂಲದ ಕ್ರಿಸ್ಟೋ ರೇ ಹೆಸರಿನ ಮೀನುಗಾರಿಕಾ ಬೋಟು ನವೆಂಬರ್ 27ರಂದು ಮೀನುಗಾರಿಕೆಗೆ ತೆರಳಿತ್ತು. ಇಂಜಿನ್‌ನಲ್ಲಿ ಸಮಸ್ಯೆಯಾಗಿ ದಾರಿ ತಪ್ಪಿದ್ದರಿಂದ ಮೀನುಗಾರಿಕಾ ಬೋಟ್ ಅಪಾಯದಲ್ಲಿದ್ದು, 4 ದಿನ ಸಮುದ್ರದಲ್ಲೇ ಕಾಲ ಕಳೆದಿದ್ದರು. ಕೊನೆಗೆ ಸ್ಯಾಟಲೈಟ್ ಫೋನ್ ಮೂಲಕ ಮಾಲೀಕರನ್ನು ಸಂಪರ್ಕಿಸಿ ಕೋಸ್ಟ್‌ ಗಾರ್ಡ್ ನೆರವು ಕೋರಿದ್ದರು ಎನ್ನಲಾಗಿದೆ.

ಮಂಗಳವಾರ ಬೆಳಿಗ್ಗೆ ಬೋಟಿನ ಲೊಕೇಶನ್ ಪತ್ತೆಹಚ್ಚಿ ಮೀನುಗಾರರನ್ನು ಸಂಪರ್ಕಿಸಿದ ಕೋಸ್ಟ್‌ ಗಾರ್ಡ್ ಸಿಬ್ಬಂದಿ ಸ್ಥಳೀಯ ಮೀನುಗಾರರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಹಾಳಾಗಿದ್ದ ಬೋಟನ್ನು ಮತ್ತೊಂದು ಮೀನುಗಾರಿಕಾ ಬೋಟ್ ಸಹಾಯದಿಂದ ದಡಕ್ಕೆ ಎಳೆದು ತರಲಾಗಿದೆ. ಗೋವಾದ ಪಣಜಿ ಮೂಲದ ಮೀನುಗಾರಿಕಾ ಬೋಟಿನಲ್ಲಿ 3 ಕನ್ನಡಿಗರು ಸೇರಿ 26 ಮಂದಿ ಕಾರ್ಮಿಕರಿದ್ದರು.    

ಇದನ್ನೂ ಓದಿ:ಪಶ್ಚಿಮ ಕರಾವಳಿಯಲ್ಲಿ ಮತ್ಸ್ಯಕ್ಷಾಮ: ಬಂದರಿನಲ್ಲಿ ಶೇ.50 ರಷ್ಟು ಬೋಟ್​ಗಳ ಲಂಗರು

ABOUT THE AUTHOR

...view details