ಬೆಳಕಿನ ಪ್ರದರ್ಶನದ ಮೂಲಕ 11 ವಾರಗಳ ಲಾಕ್‌ಡೌನ್ ತೆರವು ಸಂಭ್ರಮಿಸಿದ 'ವೀರರ ನಗರ' - ವುಹಾನ್ ಲಾಕ್‌ಡೌನ್ ತೆರವು ಸುದ್ದಿ
11 ವಾರಗಳ ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ವುಹಾನ್ ನಿವಾಸಿಗಳು ಎಂದಿನಂತೆ ಬೀದಿಗಿಳಿಯುತ್ತಿದ್ದಾರೆ. ಆ ಬಳಿಕ ಯಾವುದೇ ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭವನ್ನು ಇಲ್ಲಿನ ಜನತೆ ವಿಶೇಷವಾಗಿ ತೋರಿಸಿಕೊಂಡಿದ್ದಾರೆ. ಇಲ್ಲಿನ ಪ್ರಮುಖ ನದಿಯಾದ ಯಾಂಗ್ಝಿ ನದಿಯ ಎರಡೂ ಬದಿಯಲ್ಲಿ ಬೆಳಕಿನ ಪ್ರದರ್ಶನ ಇಲ್ಲಿನ ಜನರ ಗಮನ ಸೆಳೆಯಿತು. ಗಗನಚುಂಬಿ ಕಟ್ಟಡಗಳಲ್ಲಿ ಆರೋಗ್ಯ ಕಾರ್ಯಕರ್ತರು ರೋಗಿಗಳಿಗೆ ಚಿಕಿತ್ಸೆ ನೀಡುವ ಅನಿಮೇಟೆಡ್ ಚಿತ್ರಗಳನ್ನು ಪ್ರದರ್ಶಿಸಲಾಯ್ತು. ಜೊತೆಗೆ ವುಹಾನ್ ನಗರಕ್ಕೆ 'ವೀರರ ನಗರ(heroic city)' ಎಂಬ ಅಕ್ಷರಗಳನ್ನು ಕಟ್ಟಡಗಳ ಮೇಲೆ ತೋರಿಸಲಾಯ್ತು. ಈ ಶೀರ್ಷಿಕೆಯನ್ನು ವುಹಾನ್ ನಗರಕ್ಕೆ ಚೀನಾ ಅಧ್ಯಕ್ಷ ಮತ್ತು ಕಮ್ಯುನಿಸ್ಟ್ ಪಕ್ಷದ ನಾಯಕ ಕ್ಸಿ ಜಿನ್‌ಪಿಂಗ್ ನೀಡಿದ್ದಾರಂತೆ.