ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ದೀಪಿಕಾ ಪಡುಕೋಣೆ - ವಿಡಿಯೋ ನೋಡಿ - ದೀಪಿಕಾ ತಿರುಪತಿ
Published : Dec 15, 2023, 11:42 AM IST
ತಿರುಪತಿ (ಆಂಧ್ರಪ್ರದೇಶ): ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ, ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಕುಟುಂಬಸ್ಥರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಮುಂದಿನ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಫೈಟರ್ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿರುವ ದೀಪಿಕಾ ಪಡುಕೋಣೆ ವೆಂಕಟೇಶ್ವರನ ಆಶೀರ್ವಾದ ಪಡೆಯಲು ಸಹೋದರಿ ಅನಿಶಾ ಅವರೊಂದಿಗೆ ಗುರುವಾರ ಸಂಜೆ ತಿರುಮಲಕ್ಕೆ ಆಗಮಿಸಿದ್ದರು.
ದೀಪಿಕಾ ಸಹೋದರಿ ಅನಿಶಾರೊಂದಿಗೆ ತಿರುಮಲಕ್ಕೆ ಆಗಮಿಸುತ್ತಿರುವ ಹಲವು ಫೋಟೋ - ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ. ದೇವರ ದರ್ಶನಕ್ಕಾಗಿ, ದೀಪಿಕಾ ಸಲ್ವಾರ್ ಸೂಟ್ ಧರಿಸಿದ್ದರು. ಬನ್ ಹೇರ್ಸ್ಟೈಲ್ನೊಂದಿಗೆ ಸಾಂಪ್ರದಾಯಿಕವಾಗಿ ನೋಟದಲ್ಲಿ ಕಾಣಿಸಿಕೊಂಡರು.
ಇಂದು ಬೆಳಗ್ಗೆ ವಿಷ್ಣುವಿನ ಅವತಾರ ಎಂದು ನಂಬಲಾದ ವೆಂಕಟೇಶ್ವರನಿಗೆ ಸಮರ್ಪಿತವಾದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ದೀಪಿಕಾ ಪಡುಕೋಣೆ ಪ್ರಾರ್ಥನೆ ಸಲ್ಲಿಸಿದರು. ಈ ದೇವಾಲಯವನ್ನು ಕಲಿಯುಗದ ವೈಕುಂಠ ಎಂದು ಸಹ ಕರೆಯಲಾಗುತ್ತದೆ.
ಇದನ್ನೂ ಓದಿ:'ಋತುಚಕ್ರ ರಜೆ ಅಗತ್ಯವಿಲ್ಲ': ಸ್ಮೃತಿ ಇರಾನಿ ಹೇಳಿಕೆ ಬೆಂಬಲಿಸಿದ ಕಂಗನಾ ರಣಾವತ್
ಇನ್ನು ದೀಪಿಕಾ ಪಡುಕೋಣೆ ಅವರ ಫೈಟರ್ ಸಿನಿಮಾ 2024ರ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೇ, ವೈಜ್ಞಾನಿಕ ಆ್ಯಕ್ಷನ್ ಚಿತ್ರ ಕಲ್ಕಿ 2898 ಎಡಿ ನಲ್ಲಿಯೂ ಪ್ರಭಾಸ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ, ಅಮಿತಾಭ್ ಬಚ್ಚನ್ ಜೊತೆ ದಿ ಇಂಟರ್ನ್ ಮತ್ತು ಬಹುತಾರಾಗಳದ ಸಿಂಗಮ್ ಎಗೈನ್ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.