ನಟ ವಿಜಯ ರಾಘವೇಂದ್ರ ಪತ್ನಿ ನಿಧನ: ಸಹೋದರ ಶ್ರೀಮುರಳಿ ಹೇಳಿದ್ದಿಷ್ಟು.. - etv bharat kannada
ಚಂದನವನದ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಬಂಧಿಕರೊಂದಿಗೆ ಬ್ಯಾಂಕಾಕ್ಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ. ವಿಜಯ ರಾಘವೇಂದ್ರ ಪತ್ನಿ ನಿಧನರಾಗಿದ್ದು, ಅವರ ಕುಟುಂಬವನ್ನು ಆಘಾತಕ್ಕೀಡು ಮಾಡಿದೆ. ನಟನ ಮನೆಯಲ್ಲಿ ನೀರವ ಮೌನ ಆವರಿಸಿದೆ. ಸ್ಪಂದನಾ ಪಾರ್ಥಿವ ಶರೀರವನ್ನು ನಾಳೆ ಬೆಂಗಳೂರಿಗೆ ತರಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಅಧಿಕೃತವಾಗಿ ಮಾತನಾಡಿದ ನಟ, ವಿಜಯ ರಾಘವೇಂದ್ರ ಸಹೋದರ ಶ್ರೀಮುರಳಿ, "ಅಣ್ಣ ನನಗೆ ಕರೆ ಮಾಡಿ ಹೇಳಿರೋದಿಷ್ಟೆ. ಅತ್ತಿಗೆ ಸಂಬಂಧಿಕರ ಜೊತೆ ಟ್ರಿಪ್ಗೆ ಹೋಗಿದ್ದರು. ಅಣ್ಣ ಶೂಟಿಂಗ್ ಮುಗಿಸಿಕೊಂಡು ಅವರೊಂದಿಗೆ ಸೇರಿಕೊಂಡಿದ್ದಾರೆ. ತುಂಬಾ ಖುಷಿಯಲ್ಲಿ ಎಲ್ಲರೂ ಜೊತೆಯಾಗಿ ಟೈಮ್ ಸ್ಪೆಂಡ್ ಮಾಡಿದ್ದಾರೆ. ಆದರೆ, ನಿನ್ನೆ ರಾತ್ರಿ ಮಲಗಿದ ಅತ್ತಿಗೆ ಮತ್ತೆ ಏಳಲೇ ಇಲ್ಲ. ಲೋ ಬಿಪಿಯಾಗಿ ಈ ರೀತಿ ಆಗಿರಬಹುದು ಎಂದು ನಾವು ಅಂದುಕೊಂಡಿದ್ದೇವೆ. ಮತ್ತಷ್ಟು ಮಾಹಿತಿಯನ್ನು ನಾಳೆ ನೀಡುತ್ತೇವೆ. ಆದರೆ ಈ ಘಟನೆ ಆಗಿರುವುದಂತು ನಿಜ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕನ್ನಡ ಚಿತ್ರರಂಗಕ್ಕೆ ಮೇಲಿಂದ ಮೇಲೆ ಆಘಾತ; ಹೃದಯಘಾತದಿಂದ ಸಾವನ್ನಪ್ಪಿದ ನಟ-ನಟಿಯರಿವರು