ಕರ್ನಾಟಕ

karnataka

ಚಾಮುಂಡಿ ತಾಯಿಯ ದರ್ಶನ ಪಡೆದ ಸಂಜಯ್ ದತ್

ETV Bharat / videos

ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಬಾಲಿವುಡ್‌ ನಟ ಸಂಜಯ್ ದತ್- ವಿಡಿಯೋ - Sanjay Dutt visits Chamundeshwari temple

By

Published : Jul 18, 2023, 1:06 PM IST

ಮೈಸೂರು: ಬಾಲಿವುಡ್ ನಟ ಸಂಜಯ್ ದತ್ ಸದ್ಯ ಮೈಸೂರಿನಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಪಾರಂಪರಿಕ ನಗರಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆ.ಡಿ ಚಿತ್ರದ ಶೂಟಿಂಗ್ ಭರ್ಜರಿಯಾಗಿ ​​ನಡೆಯುತ್ತಿದೆ. ಸೋಮವಾರ ಸಂಜೆ ನಿರ್ದೇಶಕ ಜೋಗಿ ಪ್ರೇಮ್ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ದತ್, ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದರು. ಕೆಡಿ ಚಿತ್ರತಂಡದವರು ಜೊತೆಗಿದ್ದರು.

ಕಳೆದ 20 ದಿನಗಳಿಂದ ಜೋಗಿ ನಿರ್ದೇಶನ, ಧ್ರುವಸರ್ಜಾ ಅಭಿನಯದ ಕೆಡಿ ಸಿನಿಮಾದ ಶೂಟಿಂಗ್​​ ಮೈಸೂರಿನ ವಿವಿಧ ಭಾಗಗಳಲ್ಲಿ ಸಾಗುತ್ತಿದೆ. ಈ ಚಿತ್ರದಲ್ಲಿ ಸಂಜಯ್ ದತ್ ಸಹ ಅಭಿನಯಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಅವರು ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದು, ಸೋಮವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಚಿತ್ರತಂಡ ಹಾಗೂ ನಿರ್ದೇಶಕ ಪ್ರೇಮ್ ಜೊತೆ ಸೇರಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಂಜಯ್‌ ದತ್‌, ''ನಮ್ಮ ಈ ಚಿತ್ರ ಚೆನ್ನಾಗಿದೆ, ನೋಡಿ'' ಎಂದಷ್ಟೇ ತಿಳಿಸಿ ಹೊರಟು ಹೋದರು.

ಇದನ್ನೂ ಓದಿ:ಪ್ರಾಜೆಕ್ಟ್ ಕೆ - ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಫಸ್ಟ್ ಲುಕ್ ಅನಾವರಣ

ABOUT THE AUTHOR

...view details