ಮಾರುಕಟ್ಟೆ ರೌಂಡಪ್: 506 ಅಂಕ ಜಿಗಿದ ಸೆನ್ಸೆಕ್ಸ್, ಪೆಟ್ರೋಲ್, ಡೀಸೆಲ್ ದರದ ಕ್ವಿಕ್ ಲುಕ್... - ಇಂದಿನ ಬೆಳ್ಳಿ ಬೆಲೆ
ಮುಂಬೈ: ಸತತ ವಿದೇಶಿ ಬಂಡವಾಳದ ಒಳಹರಿವಿನ ಮಧ್ಯೆ ಐಟಿ ಮತ್ತು ಫೈನಾನ್ಸ್ ಷೇರುಗಳ ಲಾಭದ ಬೆಂಬಲದೊಂದಿಗೆ ಸೆನ್ಸೆಕ್ಸ್ ಮಂಗಳವಾರ 506 ಅಂಕಗಳ ಏರಿಕೆಯಿಂದಾಗಿ ಸಾರ್ವಕಾಲಿ ಗರಿಷ್ಠ ಮಟ್ಟ ತಲುಪಿದೆ. ಮಂಗಳವಾರದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 505.72 ಅಂಕ ಏರಿಕೆಯಾಗಿ 44,655.44 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 140.10 ಅಂಕ ಜಿಗಿದು 13,109.05 ಅಂಕ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಂಡವು.