ಮಾರುಕಟ್ಟೆ ರೌಂಡಪ್: ಏಕಾಏಕಿ ದಿಢೀರ್ 633 ಅಂಕ ಕುಸಿದ ಸೆನ್ಸೆಕ್ಸ್ - Market Roundup
ಮುಂಬೈ: ದುರ್ಬಲ ಜಾಗತಿಕ ಮಾರುಕಟ್ಟೆಗಳ ವಹಿವಾಟಿನ ನಡುವೆ ಎಲ್ಲ ವಲಯಗಳಲ್ಲಿನ ಷೇರುಗಳ ಮಾರಾಟ ಒತ್ತಡದಿದಂದ ಮುಂಬೈ ಷೇರುಪೇಟೆ ಮಹಾ ಕುಸಿತ ದಾಖಲಿಸಿದೆ. ತತ್ಪರಿಣಾಮ ದೇಶಿ ಷೇರು ವಿನಿಮಯ ಕೇಂದ್ರದಲ್ಲಿ ತೀವ್ರ ಮಾರಾಟ ಒತ್ತಡ ಕಂಡುಬಂತು. ವಾರಾಂತ್ಯದ ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ 633.76 ಅಂಕ ಕುಸಿದು 38,357.18 ಅಂಕಗಳ ಮುಟ್ಟದಲ್ಲೂ ರಾಷ್ಟ್ರೀಯ ಷೇರು ಸ್ಯೂಚಂಕ ನಿಫ್ಟಿ 193.60 ಅಂಕ ಕುಸಿದು 11,333.85 ಅಂಕಗಳ ಮಟ್ಟಕ್ಕೆ ತಲುಪಿತು.