ಮಾರುಕಟ್ಟೆ ರೌಂಡಪ್: ಹೊಸ ಉತ್ತುಂಗಕ್ಕೇರಿದ ಮುಂಬೈ ಗೂಳಿ! - ಇಂದಿನ ಎನ್ಎಸ್ಇ ನಿಫ್ಟಿ
ಮುಂಬೈ: ಈಕ್ವಿಟಿ ಮಾನದಂಡಗಳು ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರದ ವಹಿವಾಟಿನಂದು ಹೊಸ ಉತ್ತುಂಗಕ್ಕೇರಿದವು. ಸ್ಥೂಲ ಆರ್ಥಿಕ ಸೂಚಕಗಳು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಪ್ರವೃತ್ತಿಯ ಪ್ರಭಾವಕ್ಕೆ ಒಳಗಾದ ಬಿಎಸ್‌ಇ ಸೆನ್ಸೆಕ್ಸ್, ದಿನದ ವಹಿವಾಟಿನ ಅಂತ್ಯಕ್ಕೆ 403.29 ಅಂಕ ಏರಿಕೆಯಾಗಿ 46,666.46 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 114.85 ಅಂಕ ಏರಿಕೆ ಕಂಡು 13,682.70 ಅಂಕಗಳ ಮಟ್ಟದಲ್ಲಿ ಕೊನೆಗೊಂಡವು.